Advertisement
ಅರ್ಜಿ ಸಲ್ಲಿಸಲು ಮೇ 31 ಕಡೆಯ ದಿನಾಂಕವಾಗಿದೆ. ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಇಂಗ್ಲೆಂಡ್‌ಗೆ ತೆರಳಿರುವ ನಡುವೆಯೇ ಈ ಬೆಳವಣಿಗೆಯಾಗಿರುವುದು ಕುಂಬ್ಳೆಗೆ ಮುಜುಗರ ತರಿಸುವ ಘಟನೆಯಾಗಿದೆ. ಜತೆಗೆ ಕುಂಬ್ಳೆ ವಿರುದ್ಧ ಬಿಸಿಸಿಐ ಗರಂ ಆಗಿದೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
Related Articles
Advertisement
ಕುಂಬ್ಳೆ ಬೇಡಿಕೆಗಳು ಬಿಸಿಸಿಐಗೆ ಒಪ್ಪಿಗೆಯಿಲ್ಲ
ಸದ್ಯ ಬಿಸಿಸಿಐ ಶೇ.26ರಷ್ಟು ಆದಾಯವನ್ನು ಕ್ರಿಕೆಟಿಗರಿಗೆಂದು ಮೀಸಲಿರಿಸಿದೆ. ಇದನ್ನು ಹೆಚ್ಚಿಸಲು ಅದು ಸಿದ್ಧವಿಲ್ಲ. ಆದರೆ ಕುಂಬ್ಳೆಯ ವೇತನ ಏರಿಕೆಯನ್ನು ಪರಿಗಣಿಸಿದರೆ ಶೇ.26 ಮಿತಿಯನ್ನು ಹೆಚ್ಚಿಸಬೇಕಾಗುತ್ತದೆ. ಕೋಚ್‌ಗೆ ಆಯ್ಕೆ ಸಮಿತಿಯಲ್ಲಿ ಸ್ಥಾನ ನೀಡಬೇಕೆಂದು ಕುಂಬ್ಳೆ ಬಯಸುತ್ತಾರೆ. ಸದ್ಯದ ಬಿಸಿಸಿಐ ನೀತಿಯ ಪ್ರಕಾರ ಆಯ್ಕೆ ಸಮಿತಿ ಸಭೆಯಲ್ಲಿ ಕೋಚ್ ಮತ್ತು ನಾಯಕ ಹಾಜರಿರಬಹುದು. ಆದರೆ ಅವರು ಮತದಾನ ಮಾಡುವ ಅಧಿಕಾರ ಹೊಂದಿಲ್ಲ. ಅಲ್ಲದೇ ಲೋಧಾ ಸಮಿತಿ ನೀತಿ ಪ್ರಕಾರ, ಆಯ್ಕೆ ಸಮಿತಿಯಲ್ಲಿ ಮೂವರಿಗಿಂತ ಹೆಚ್ಚು ಸದಸ್ಯರಿರುವಂತಿಲ್ಲ. ಕೋಚ್‌ಗೆ ಸ್ಥಾನ ನೀಡಿದರೆ ಲೋಧಾ ಶಿಫಾರಸನ್ನು ಮೀರಬೇಕಾಗುತ್ತದೆ. ಇದು ಕೂಡ ಬಿಸಿಸಿಐ ಸಿಟ್ಟು ತರಿಸಿದೆ. ಕುಂಬ್ಳೆ ಮೇಲೆ ಬಿಸಿಸಿಐ ಸಿಟ್ಟಿಗೇನು ಕಾರಣ?
ಕುಂಬ್ಳೆ ಸದ್ಯದ ಮಟ್ಟಿಗೆ ಅತ್ಯಂತ ಯಶಸ್ವಿ ಕೋಚ್ ಆಗಿದ್ದಾರೆ. ಆಟಗಾರರನ್ನು ಅಷ್ಟೇ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ನಾಯಕ ಕೊಹ್ಲಿಯೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೆ ಬಿಸಿಸಿಐ ಪದಾಧಿಕಾರಿಗಳೊಂದಿಗೆ ಮಾತ್ರ ಸಂಬಂಧ ಕೆಡಿಸಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಕುಂಬ್ಳೆ ಹಲವು ಬೇಡಿಕೆಗಳನ್ನಿಟ್ಟಿದ್ದರೂ ಅದನ್ನು ಈಡೇರಿಸುವ ಆಸಕ್ತಿ ಬಿಸಿಸಿಐಗಿಲ್ಲ ಎನ್ನಲಾಗಿದೆ. ಕುಂಬ್ಳೆ ಮೇಲೆ ಬಿಸಿಸಿಐ ಸಿಟ್ಟಾಗಲು ಈ ಕೆಳಗಿನ ಅಂಶಗಳನ್ನು ಮೂಲಗಳು ಪ್ರಸ್ತಾಪಿಸಿವೆ.
1. ಎಲ್ಲದ್ದಕ್ಕೂ ಕುಂಬ್ಳೆ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳ ಬಳಿ ತೆರಳುತ್ತಿರುವುದು
2. ಕ್ರಿಕೆಟಿಗರ ವೇತನವನ್ನು ಶೇ.150ರಷ್ಟು ಏರಿಸುವಂತೆ ಕುಂಬ್ಳೆ ಒತ್ತಾಯಿಸಿರುವುದು
3. ತಮ್ಮ ಸಂಭಾವನೆಯನ್ನು 8 ಕೋಟಿ ರೂ.ಗೇರಿಸುವಂತೆ ಕೇಳಿರುವುದು.
4. ನಾಯಕ ಕೊಹ್ಲಿಯ ವೇತನವನ್ನು ನಾಯಕತ್ವದ ಹೊರೆಯ ಕಾರಣಕ್ಕೆ ಶೇ.25ರಷ್ಟು ಹೆಚ್ಚಿಸುವಂತೆ ಕೇಳಿಕೊಂಡಿರುವುದು
5. ಮುಖ್ಯ ಕೋಚ್ ಆಗಿರುವುದರಿಂದ ತಮ್ಮನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ತೆಗೆದುಕೊಳ್ಳುವಂತೆ ಕೋರಿರುವುದು