Advertisement

ಶಿಕ್ಷಕರ ವರ್ಗ: ವೈದ್ಯಕೀಯ ಪ್ರಮಾಣ ಪತ್ರ ಕಡ್ಡಾಯ

07:21 AM Jun 16, 2019 | Lakshmi GovindaRaj |

ಬೆಂಗಳೂರು: ವೈದ್ಯಕೀಯ ಮತ್ತು ಅಂಗವಿಕಲ ಪ್ರಕರಣಗಳಿಗೆ ಸಂಬಂಧಿಸಿದ ಶಿಕ್ಷಕರ ವರ್ಗಾವಣೆಗೆ ಸರ್ಕಾರದ ಆದೇಶದ ಅನುಸಾರ ಜಿಲ್ಲಾ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

Advertisement

ಶಿಕ್ಷಕ ಅಥವಾ ಶಿಕ್ಷಕ ಪತಿ-ಪತ್ನಿ ಅಥವಾ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಮತ್ತು ಅದಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ಬೇರೆ ಕಡೆಗೆ ವರ್ಗಾವಣೆ ಬಯಸಿದ ಸಂದರ್ಭದಲ್ಲಿ ವರ್ಗಾವಣೆಗೆ ಅವಕಾಶ ಇದೆ. ಕ್ಯಾನ್ಸರ್‌, ಕಿಡ್ನಿ ವೈಫ‌ಲ್ಯ, ಹೃದಯ ಸಂಬಂಧಿ ಕಾಯಿಲೆ, ಎಚ್‌ಐವಿ ಮೊದಲಾದ ತೀವ್ರ ತೆರನಾದ ಕಾಯಿಲೆಯಲ್ಲಿ ಶಿಕ್ಷಕರು ಅಥವಾ ಅವರ ಅವಲಂಬಿತರು ಬಳುತ್ತಿದ್ದರೆ ಅಂತವರಿಗೆ ವರ್ಗಾವಣೆ ಪಡೆಯುಲು ಅವಕಾಶ ಇದೆ.

ಅಂಗಾಂಗ ಕಸಿ ಹಾಗೂ ಹೃದಯ ಶಸ್ತ್ರಚಿಕಿತ್ಸೆ ಮಾಡಿಕೊಂಡಿರುವವರಿಗೆ ಹಾಗೂ ಗರ್ಭಿಣಿಯರಿಗೂ ನಿಯಮದಲ್ಲಿ ವಿಶೇಷ ಅವಕಾಶ ಮಾಡಿಕೊಡಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಅಗತ್ಯ ವೈದ್ಯಕೀಯ ಪ್ರಮಾಣ ಪತ್ರ ಒದಗಿಸಲೇ ಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next