Advertisement

Teachers ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು

07:00 PM Mar 18, 2024 | Shreeram Nayak |

ತೀರ್ಥಹಳ್ಳಿ : ಶಿಕ್ಷಕರು ಮಾಡಿದ ಸೇವೆಯನ್ನು ಗುರುತಿಸಿ ಅವರನ್ನು ಅಭಿನಂಧಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ.ಈ ಬೆಳವಣೆಗೆ ಹೀಗೆ ಮುಂದುವರೆಯಲಿ.ಶಿಕ್ಷಕರು ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಣೇಶ್ ವೈ ತಿಳಿಸಿದರು.

Advertisement

ಮಂಡಗದ್ದೆಯ ಕ್ಲಸ್ಟರ್ ಶಿಕ್ಷಕರ ಬಳಗದಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಹೃದಯ ಸ್ಪರ್ಶಿ ಸೇವಾಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ತುಂಬಾ ಶಿಸ್ತುಬದ್ದವಾಗಿ ಆಯೋಜಿಸಿದ್ದ ಮಂಡಗದ್ದೆಯ ಸಿ.ಆರ್.ಪಿ ಸರಸ್ವತಿ ಅವರನ್ನು ಇದೇ ಸಂದರ್ಭದಲ್ಲಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಂತಿ ,ಶಿಕ್ಷಣ ಸಂಯೋಜಕಿ ಜ್ಯೋತಿ,ನಾಲೂರು ಸಿ.ಆರ್.ಪಿ ಸಾದಿಕ್ ಅಹಮದ್,ಮಹಾಬಲೇಶ್ವರ್ ಹೆಗಡೆ ವರ್ಗಾವಣೆಗೊಂಡ ಶಿಕ್ಷಕರ ಕುರಿತು ಮಾತನಾಡಿದರು.
ನಂತರ ವರ್ಗಾವಣೆಗೊಂಡ ಶಿಕ್ಷಕರಾದ ನಾಗರಾಜ್,ಫೈರೋಜ್ ,ಶೋಭಾ ಮರಿಯಮ್ ಅವರನ್ನು ಅಭಿನಂದಿಸಲಾಯಿತು.

ಮಂಡಗದ್ದೆ ಕ್ಲಸ್ಟರ್ ಸಿ‌.ಆರ್.ಪಿ ಸರಸ್ವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕರ ಸಂಘದ ನಿರ್ದೇಶಕರುಗಳಾದ ಮೂಕಾಂಬಿಕಾ,ಎಮ್.ಸಿ ಮಂಜುನಾಥ್, ಆನಂದ್‌ಕುಮಾರ್ ಎನ್.ಆರ್ . ಮಲ್ಲೇಶ್ ,ಪ್ರಕಾಶ್ ಟಿ.ಆರ್ ಆರತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next