Advertisement

ನಾಳೆ ಸರ್ಕಾರಿ ಶಾಲಾ ಬಂದ್‌ ಮಾಡಿ ಶಿಕ್ಷಕರ ಪ್ರತಿಭಟನೆ

12:45 PM Jul 08, 2019 | Team Udayavani |

ಕೋಲಾರ: ಶಿಕ್ಷಕರ ಏಳು ಪ್ರಮುಖ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಎರಡನೇ ಹಂತದ ರಾಜ್ಯಾವ್ಯಾಪಿ ಹೋರಾಟದ ಭಾಗವಾಗಿ ಜು.9ರಂದು ಜಿಲ್ಲೆಯ ಎಲ್ಲಾ ಶಿಕ್ಷಕರು ಶಾಲೆಗಳನ್ನು ಬಂದ್‌ ಮಾಡಿ ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ ಜಿಲ್ಲಾಧ್ಯಕ್ಷ ಜಗದೀಶ್‌ ಹೇಳಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮೇ 30 ರಂದು ಬೆಂಗಳೂರಿನಲ್ಲಿ ಸಭೆ ಸೇರಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಜೂ.30 ರವರೆಗೂ ಗಡುವು ನೀಡಲಾಗಿತ್ತು. ಆದರೆ, ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಹೋರಾಟವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಡಿಡಿಪಿಐ ಕಚೇರಿಗಳ ಮುಂದೆ ಜು.9ರಂದು ಶಿಕ್ಷಕರು ಇಡೀ ದಿನ ಪ್ರತಿಭಟನೆ ನಡೆಸಲಿದ್ದಾರೆಂದು ಹೇಳಿದರು.

ಈ ಎರಡನೇ ಹಂತದ ಹೋರಾಟಕ್ಕೂ ರಾಜ್ಯ ಸರಕಾರ ಸ್ಪಂದಿಸದಿದ್ದರೆ 3ನೇ ಹಂತದ ಹೋರಾಟವಾಗಿ ಸೆ.5ರ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ ವಿಧಾನ ಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ವಿವಿಧ ಶಿಕ್ಷಕರ ಸಂಘಗಳ ಮುಖಂಡರಾದ ಜಿ. ಶ್ರೀನಿ ವಾಸ್‌, ಎಂ.ನಾಗರಾಜ್‌, ಸಿ.ಅಪ್ಪೇಗೌಡ, ವೆಂಕಟ ಶಿವಪ್ಪ, ಜಿ.ಎಂ.ಗೋವಿಂದರೆಡ್ಡಿ, ವಿ.ಕಿಟ್ಟಪ್ಪ, ಎಂ.ನಾಗರಾಜ, ಆರ್‌. ನರಸಿಂಹ, ಪಿ.ಎಂ.ಕೃಷ್ಣಮೂರ್ತಿ, ವಿ. ತಿಪ್ಪಣ್ಣ, ವಿನೋದ್‌ಬಾಬು, ಆಂಜನೇ ಯಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next