Advertisement

ಶಾಲಾ ಗೋಡೆಗೆ ಚಿತ್ರ ಬಿಡಿಸಿದ ಶಿಕ್ಷಕರು!

07:08 PM Mar 21, 2020 | Naveen |

ಮುದಗಲ್ಲ: ಕೊರೊನಾ ರಜೆ ಬಳಸಿಕೊಂಡ ಸಮೀಪದ ತಲೇಖಾನ್‌ ಪ್ರೌಢ ಶಾಲೆಯ ಶಿಕ್ಷಕರು ಶಾಲೆಯ ಅಂದಚಂದ ಹೆಚ್ಚಿಸುವ ಕಾಯಕಕ್ಕೆ ಕೈಹಾಕಿರುವ ಶಿಕ್ಷಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ದೈನಂದಿನ ಶಾಲಾ ಸಮಯದಲ್ಲಿ ದಾಖಲಾತಿ ನಿರ್ವಹಿಸಿದ ಬಳಿಕ ಬಿಡುವಿನ ಸಮಯ ಬಳಸಿಕೊಂಡ ಶಾಲೆಯ ಮುಖ್ಯಶಿಕ್ಷಕ ನಾಗರಾಜ ನೇತೃತ್ವದಲ್ಲಿ ಸಹ ಶಿಕ್ಷಕರು ಶಾಲೆಯ ಒಳಗೋಡೆ ಮತ್ತು ಹೊರ ಗೋಡೆಗಳಿಗೆ ಬಣ್ಣ ಬಳಿಸಿದ ಬಳಿಕ ಬಣ್ಣಬಣ್ಣದ ವಾರ್ಲೆ ಚಿತ್ತಾರ ಬಿಡಿಸಿರುವುದು ನೋಡುಗರ ಗಮನ ಸೆಳೆಯುತ್ತಿವೆ. ಶಾಲೆಯಲ್ಲಿ ಮಿತ ಬಳಕೆ ಖರ್ಚಿನಿಂದ ಉಳಿದ ಅನುದಾನ ಬಳಸಿಕೊಂಡು ಬಣ್ಣ ಖರೀದಿಸಲಾಗಿದೆ.

ಚಿತ್ರಕಲೆ ಶಿಕ್ಷಕ ಶಿವಲಿಂಗಯ್ಯ ಚಂದ್ರಗಿರಿಮಠ ಮಾರ್ಗದರ್ಶನದಲ್ಲಿ ಎಲ್ಲ ಶಿಕ್ಷಕರು ಚಿತ್ರ ಬಿಡಿಸಲು ಸಹಕಾರ ನೀಡಿದಲ್ಲದೇ ತಾವೇ ಬಣ್ಣ ಬಳಿಯುವ ಮೂಲಕ ಚಿತ್ರಕಲೆಗೆ ಜೀವ ತುಂಬಿದರು. ಕೇವಲ ಗೋಡೆ ಬರಹ, ಚಿತ್ರಬಿಡಿಸುವ ಕಾರ್ಯ ಮಾತ್ರವಲ್ಲದೇ, ಬಗೆಬಗೆಯ ಗಿಡಗಳನ್ನು ಬೆಳೆಸುವ ಮೂಲಕ ಶಾಲಾ ಆವರಣದಲ್ಲಿ ಪರಿಸರ ಕಾಳಜಿ ತೋರಿಸಿದ್ದಾರೆ.

ಗಣಕಯಂತ್ರ ಕೊಠಡಿ, ವಿದ್ಯಾರ್ಥಿಗಳ ತರಗತಿ ಕೊಠಡಿಯಲ್ಲಿಯೂ ಸಹ ವಾರ್ಲೆ ಚಿತ್ರಗಳನ್ನು ಬಿಡಿಸುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಭೌತಿಕ ಜ್ಞಾನದ ಜೊತೆ ಮಕ್ಕಳಿಗೆ ಸಂಸ್ಕಾರ ನೀಡುತ್ತಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳಲ್ಲಿ ಚಿತ್ರಕಲೆಯ ಆಶಕ್ತಿ ಹೆಚ್ಚಿಸುವಂತೆ ಮಾಡುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನಿಯವಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಂಬಣ್ಣ ಕರಡಕಲ್ಲ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next