Advertisement

“ಶಿಕ್ಷಕರ ಜೀವನವೇ ಒಂದು ನಿತ್ಯ ಸಂದೇಶ’

08:10 AM Sep 06, 2017 | Team Udayavani |

ಮಲ್ಪೆ: “ಶಿಕ್ಷಕರ ಜೀವನವೇ ಒಂದು ನಿತ್ಯ ಸಂದೇಶ. ಶಿಕ್ಷಕರ ಕಡೆಗಣನೆಯಾಗದಂತೆ ಅವರಿಗೆ ಬೆಂಬಲ, ಪ್ರೋತ್ಸಾಹವನ್ನು ಸೂಚಿಸುವ ಉದೇªಶದಿಂದಲೇ ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ’ ಎಂದು ನಿವೃತ್ತ ಪ್ರಾಂಶುಪಾಲ ಎಂ.ಎಲ್‌.ಸಾಮಗ ಹೇಳಿದರು.

Advertisement

ಅವರು ಮಂಗಳವಾರ ಮಲ್ಪೆ ನಾರಾಯಣಗುರು ಆಂಗ್ಲಮದ್ಯಮ ಶಾಲಾಡಳಿತ ಸಮಿತಿಯ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

“ಶಿಕ್ಷಕರು, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ವೃತ್ತಿಯಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಕೇವಲ ಪಠ್ಯಕ್ರಮಕ್ಕೆ ಸೀಮಿತಗೊಳಿಸದೆ ಮಕ್ಕಳಲ್ಲಿ ಧನಾತ್ಮಕ ಚಿಂತನೆಯನ್ನು ಉಂಟು ಮಾಡುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಜೀವನ ಶೈಲಿಯನ್ನು ನಿರ್ವಹಿಸುವ ಜವಾಬ್ದಾರಿಯೂ ಶಿಕ್ಷಕನಿಗೆ ಬೇಕು’ ಎಂದರು. 
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉಡುಪಿ ಪೂರ್ಣಪ್ರಜ್ಞ  ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್‌ ಅವರು ಮಾತನಾಡಿ “ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ವಿಷಯದಲ್ಲಿ ತಾರತಮ್ಯ ಮಾಡದೇ ಕಲಿಕೆಯಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳನ್ನು ಸೇರಿಸಿ ಬೋಧನೆ ನೀಡುವುದು ನಿಜವಾದ ಶಿಕ್ಷಕನ ಕರ್ತವ್ಯವಾಗಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಡಳಿತ ಸಮಿತಿಯ ಅಧ್ಯಕ್ಷ ದಿನೇಶ್‌ ಜಿ. ಸುವರ್ಣ ವಹಿಸಿದ್ದರು. ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ. ಸುರೇಶ್‌, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮನೋಹರ ಜತ್ತನ್‌, ಪ್ರೌಢಶಾಲಾ ಮುಖೋÂಪಾಧ್ಯಾಯ ಶಶಿಕುಮಾರ್‌, ಪ್ರಾಥಮಿಕ ಶಾಲಾ ಮುಖೋÂಪಾಧ್ಯಾಯಿನಿ ಗೀತಾ ದಿನೇಶ್‌ ಉಪಸ್ಥಿತರಿದ್ದರು. ಸ್ಥಳೀಯ ಎಲ್ಲಾ ಅಂಗನವಾಡಿ ಶಿಕ್ಷಕರನ್ನು ಈ ಸಂದರ್ಭದಲ್ಲಿ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.

ಶಾಲಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ನವೀನ್‌ಚಂದ್ರ ಸ್ವಾಗತಿಸಿದರು. ಬಿಲ್ಲವ ಸಂಘದ ಕಾರ್ಯದರ್ಶಿ ರಘುರಾಮ ಸುವರ್ಣ ವಂದಿಸಿದರು. ಶಿಕ್ಷಕಿ ಜೊವಿಟಾ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next