Advertisement

ಹಾಜರಿ ಹಾಕಿ ಶಾಲೆಗೆ ಚಕ್ಕರ್‌ ಹೊಡೆದ ಶಿಕ್ಷಕರು

10:37 AM Nov 26, 2021 | Team Udayavani |

ಶಹಾಬಾದ: ಇಲ್ಲಿನ ಶಾಲೆಯೊಂದರಲ್ಲಿ ಸುಮಾರು ಒಂಭತ್ತು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಒಬ್ಬರು ರಜೆ ಮೇಲಿದ್ದರೇ, ಉಳಿದ ಎಂಟು ಶಿಕ್ಷಕರು ಬೆಳಗ್ಗೆ ಬಂದು ಸಹಿ ಮಾಡಿ, ಮಧ್ಯಾಹ್ನದಿಂದ ಮುಖ್ಯ ಶಿಕ್ಷಕರು ಸೇರಿದಂತೆ ಐವರು ಶಿಕ್ಷಕರು ಶಾಲೆಗೆ ಚಕ್ಕರ್‌ ಹೊಡೆದ ಘಟನೆ ಗುರುವಾರ ನಡೆದಿದೆ.

Advertisement

ಇದು ನಗರದ ಮಧ್ಯ ಭಾಗದಲ್ಲಿರುವ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ. ನಗರಸಭೆ ಸದಸ್ಯ ರವಿ ರಾಠೊಡ ಅವರು ಹಠಾತ್‌ನೇ ಗುರುವಾರ ಮಧ್ಯಾಹ್ನ ಶಾಲೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಒಂಭತ್ತು ಶಿಕ್ಷಕರಲ್ಲಿ ಕೇವಲ ಮೂವರು ಶಿಕ್ಷಕರು ಹಾಜರಿದ್ದು, ಒಬ್ಬರು ರಜೆ ಮೇಲಿದ್ದರು. ಇದರಲ್ಲಿ ಸುಮಾರು ಐವರು ಶಿಕ್ಷಕರು ಮಧ್ಯಾಹ್ನ ಚಕ್ಕರ್‌ ಹೊಡೆದಿದ್ದು ಕಂಡು ಬಂತು. ಅಲ್ಲದೇ ಶಿಕ್ಷಕರ ಹಾಜರಿ ಪುಸ್ತಕದಲ್ಲಿ ಎಲ್ಲರೂ ಸಹಿ ಮಾಡಿದ್ದರು. ತಕ್ಷಣವೇ ನಗರಸಭೆ ಸದಸ್ಯ ರವಿ ರಾಠೊಡ ಸ್ಥಳದಲ್ಲಿದ್ದ ಶಿಕ್ಷಕರಿಗೆ ಮುಖ್ಯಗುರುಗಳನ್ನು ಕರೆಯಲು ತಿಳಿಸಿದರು.

ಆದರೆ ಆ ಐದು ಸಿಬ್ಬಂದಿಗಳಲ್ಲಿ ಮುಖ್ಯಗುರುಗಳು ಒಬ್ಬರು ಇದುದ್ದನ್ನು ಕಂಡು ಸಿಡಿಮಿಡಿಗೊಂಡರು. ಮುಖ್ಯಶಿಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಮನಸ್ಸಿಗೆ ಬಂದಂತೆ ಬರುತ್ತಾರೆ ಮತ್ತು ಹೋಗುತ್ತಾರೆ. ದಿನಾಲೂ ಪಾಲಕರು ನನ್ನ ಹತ್ತಿರ ದೂರು ನೀಡುತ್ತಿದ್ದಾರೆ. ಮಕ್ಕಳ ಭವಿಷ್ಯ ಬೆಳಗುವ ಶಿಕ್ಷಕರು ಈ ರೀತಿ ಶಾಲೆಗೆ ಚಕ್ಕರ್‌ ಹೊಡೆದರೇ, ಮಕ್ಕಳ ಭವಿಷ್ಯ ಏನಾಗಬಹುದು. ಎಲ್ಲಿಗೆ ಹೋಗಿದ್ದಾರೆ ಎಂದು ಶಿಕ್ಷಕರನ್ನು ಕೇಳಿದರು. ಮನೆ ಶಾಂತಿ ಇರುವುದರಿಂದ ಸಹದ್ಯೋಗಿ ಶಿಕ್ಷಕರು ಅಲ್ಲಿಗೆ ಹೋಗಿದ್ದಾರೆ ಎಂದು ಶಿಕ್ಷಕರು ತಿಳಿಸಿದರು.

ಮುಖ್ಯ ಶಿಕ್ಷಕರಾದವರು ಶಾಲೆ ಬಗ್ಗೆ ಸ್ವಲ್ಪವೂ ಜವಾಬ್ದಾರಿ ಇಲ್ಲದೇ ಹೋದರೆ ಹೇಗೆ ಎಂದು ಹೇಳಿದರಲ್ಲದೇ, ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯಸ್ವಾಮಿ ರುದ್ನೂರ್‌ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಶಿಕ್ಷಣಾಧಿಕಾರಿಗಳು ಈ ಕುರಿತು ಪರಿಶೀಲಿಸಿ ನೋಟಿಸ್‌ ಜಾರಿ ಮಾಡುವುದಾಗಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next