Advertisement

ಶಿಕ್ಷಣವನ್ನು ಕುಂಠಿತಗೊಳಿಸಲು ಯಾವ ಮಹಾಮಾರಿಗೂ ಸಾಧ್ಯವಿಲ್ಲ

10:48 AM Sep 05, 2020 | keerthan |

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

Advertisement

ಯಾವುದೇ ಶಕ್ತಿಗಿಂತ ಕಾಣದ ಒಂದು ದೈವಿಕ ಶಕ್ತಿ ನಮ್ಮನ್ನು ಕಾಪಾಡುತ್ತಿದೆ ಅಂತಹ ದೇವರ ಒಂದು ಶಕ್ತಿಯಾಗಿ ಶಿಕ್ಷಕರನ್ನು ಸೃಷ್ಟಿಯ ಮೂರು ಶಕ್ತಿಗಳಾದ ಬ್ರಹ್ಮ, ವಿಷ್ಣು ,ಮಹೇಶ್ವರರಿಗೆ ಹೋಲಿಸಲಾಗಿದೆ.

ಬ್ರಹ್ಮ ಸೃಷ್ಟಿಕಾರಕ, ವಿಷ್ಣು ಸಂಕಷ್ಟಹಾರಕ, ಮಹಾಶಿವ ದುಷ್ಟಶಕ್ತಿಯ ಸಂಹಾರಕ. ಇಂತಹ ಎಲ್ಲ ಶಕ್ತಿಗಳನ್ನು ಮೀರಿಸುವ ಶಕ್ತಿ ನಾ ನೆಂಬಂತೆ ಹೋರಾಡುತ್ತಿರುವ ವಿಶ್ವವನ್ನೇ ಬೆದರಿಸಿ ನಿಂತಿರುವ ಕೋವಿಡ್. ತನ್ನ ಅಟ್ಟಹಾಸವನ್ನು ತೋರುತ್ತಿದೆ. ಆದರೆ ಇಂತಹ ಮಹಾಮಾರಿ ಕಾಯಿಲೆಗೂ ಬೆದರದೆ ನಮ್ಮ ಶಿಕ್ಷಕ ವರ್ಗದವರು ಮುದ್ದು ಮಕ್ಕಳ ಶಿಕ್ಷಣವನ್ನು ಒದಗಿಸುವಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರಂತೆ ಶಿಕ್ಷಣವನ್ನು ನೀಡಲು ಮುಂದಾಗಿದ್ದಾರೆ. ಇಂತಹ ಸಮಸ್ತ ಕರ್ನಾಟಕದ ಶಿಕ್ಷಕರಿಗೆ ಶತಕೋಟಿ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

ಇಡೀ ಭಾರತ ದೇಶದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯು ವಿದ್ಯಾಗಮ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಪ್ರತಿ ಮಗುವಿನ ಭವಿಷ್ಯದ ಕನಸಿಗೆ ಯಾವುದೇ ನೈಸರ್ಗಿಕ ವಿಕೋಪ, ಮಹಾಮಾರಿ ಯಾವುದೇ ಅಡಚಣೆಗಳು ಅಡ್ಡಿಯಾಗದಂತೆ ನನಸಾಗಿಸುವುದು ಈ ಕಾರ್ಯಕ್ರಮದ ದೂರ ದೃಷ್ಟಿಯಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರು ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲ ವಿದ್ಯಾರ್ಥಿಗಳಿಗೆ ಸಾಧನ ಸಂಪರ್ಕಗಳ ಸಹಾಯ ಮತ್ತು ಸಹಕಾರದಿಂದ (ದೂರದರ್ಶನ ,ಲ್ಯಾಪ್ ಟಾಪ್, ಮೊಬೈಲ್,ಇಂಟರ್ನೆಟ್) ಬಳಸಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗದಂತೆ ಪ್ರತಿ ಮಗುವಿಗೂ ಮಾರ್ಗದರ್ಶನ ಒದಗಿಸುವ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

Advertisement

ಶಾಲೆಯಲ್ಲಿ ಮಾತ್ರ ಶಿಕ್ಷಣವನ್ನು ಒದಗಿಸುವ ಸ್ಥಳ ಎಂಬುದನ್ನು ಸುಳ್ಳಾಗಿಸಿ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನವನ್ನು ಒದಗಿಸುವಲ್ಲಿ ನಮ್ಮೆಲ್ಲ ಶಿಕ್ಷಕ ವರ್ಗದವರು ಬದ್ಧರಾಗಿದ್ದಾರೆ.

ಈ ವಿದ್ಯಾಗಮ ಕಾರ್ಯಕ್ರಮದಿಂದಾಗಿ ಮಗುವಿನಲ್ಲಿ ಕೋವಿಡ್ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವ, ಮಗುವಿನಲ್ಲಿ ಮನೋಸ್ಥೈರ್ಯವನ್ನು ತುಂಬುವ ಒಂದು ಪುಟ್ಟ ಪ್ರಯತ್ನವನ್ನು ನಮ್ಮೆಲ್ಲ ಶಿಕ್ಷಕ ವರ್ಗದವರು ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಿಂದಾಗಿ ಅತ್ಯಮೂಲ್ಯವಾದ ಮಕ್ಕಳ ಕಲಿಕಾ ಸಮಯವೂ ವ್ಯರ್ಥವಾಗದೆ ಕಲಿಕೆಯಲ್ಲಿ ತೊಡಗಿಸುವ ದೃಷ್ಟಿಯಿಂದ ಯಶಸ್ವಿಯಾಗಿ ಕರ್ನಾಟಕದ ಸಮಸ್ತ ಶಿಕ್ಷಕ ವರ್ಗದವರು ಕಾರ್ಯನಿರತರಾಗಿದ್ದಾರೆ. ಹಾಗೂ ಯಶಸ್ವಿಗೊಳಿಸುತ್ತಿದ್ದಾರೆ. ಇಂತಹ ಉತ್ತಮವಾದ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ನಮ್ಮ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಇತಿಹಾಸವನ್ನು ಸೃಷ್ಟಿಸಿದೆ. ಮನೋಸ್ಥೈರ್ಯ, ದೃಢ ಸಂಕಲ್ಪ, ಆತ್ಮಬಲ ಹಾಗೂ ಕರ್ತವ್ಯ ನಿಷ್ಠೆಯಿಂದ ಕೆಲಸವನ್ನು ನಿರ್ವಹಿಸಿದರೆ ಎಂತಹ ಮಹಾ ಮಾರಿಯಾದರೂ ಶಿಕ್ಷಣವನ್ನು ಕುಂಠಿತಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ನಮ್ಮ  ಸಮಸ್ತ ಕರ್ನಾಟಕ ರಾಜ್ಯದ ಶಿಕ್ಷಕರು ತೋರಿಸಿಕೊಟ್ಟಿದ್ದಾರೆ. ಶಿಕ್ಷಣ ಎಂಬುದು ಮಹಾನ್ ಶಕ್ತಿ ಅದರ ರೂವಾರಿಯಾದ ಎಲ್ಲಾ ಆತ್ಮೀಯ ಹಾಗೂ ಗೌರವಾನ್ವಿತ ಶಿಕ್ಷಕ ವರ್ಗದವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಯ ಪಡಿಸುತ್ತೇನೆ.

ನಳಿನ ಎನ್.ಆರ್.
ಸಿ .ಆರ್.ಪಿ-ತೋಳಹುಣಸೆ
ದಾವಣಗೆರೆ ದಕ್ಷಿಣ ವಲಯ

Advertisement

Udayavani is now on Telegram. Click here to join our channel and stay updated with the latest news.

Next