Advertisement

ಶಿಕ್ಷಕರಿಗಿದೆ ಸಮಾಜಕ್ಕೆ ಉತ್ತಮ ಪ್ರಜೆ ನೀಡುವ ಜವಾಬ್ದಾರಿ

02:27 PM Sep 06, 2021 | Team Udayavani |

ಹಾವೇರಿ: ವಿದ್ಯಾರ್ಥಿಗಳನ್ನು ಸುಂದರಮೂರ್ತಿಗಳನ್ನಾಗಿ ನಿರ್ಮಿಸುವ ಶಿಲ್ಪಿಗಳಾದಶಿಕ್ಷಕರು ಸಮಾಜಕ್ಕೆ ಉತ್ತಮ ಪ್ರಜೆ ನೀಡುವಜವಾಬ್ದಾರಿ ಹೊಂದಿದ್ದು, ಶಿಕ್ಷಕ ವೃತ್ತಿ ಸಾಮಾನ್ಯ ವೃತ್ತಿಯಾಗಿರದೇ ಶ್ರೇಷ್ಠ ವೃತ್ತಿಯಾಗಿದೆ ಎಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷ, ಶಾಸಕ ನೆಹರು ಓಲೇಕಾರ ಹೇಳಿದರು.

Advertisement

ನಗರದ ಜಿಲ್ಲಾ ಗುರುಭವನದಲ್ಲಿ ರವಿವಾರಡಾ| ಸರ್ವಪಲ್ಲಿ ರಾಧಾಕೃಷ್ಣನ್‌ರವರ133ನೇಜನ್ಮದಿನ ನಿಮಿತ್ತ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಜನ್ಮದಿನ ಅವರ ಅಭಿಲಾಸೆಯಂತೆ ಶಿಕ್ಷಕರದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

ಶಿಕ್ಷಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತುಕೊಡಬೇಕು ಎಂದು ಸಲಹೆ ನೀಡಿದರು.ನಗರಸಭೆ ಅಧ್ಯಕ್ಷ ಸಂಜೀವಕುಮಾರನೀರಲಗಿ ಮಾತನಾಡಿ, ಸಮಾಜದಲ್ಲಿ ಉತ್ತಮಪ್ರಜೆಯಾಗಲು ಹಾಗೂ ಸನ್ಮಾರ್ಗದಲ್ಲಿನಡೆಯುವಂತೆ ದಾರಿ ತೋರಿಸುವವನೇ ಗುರು.ಅಂದು ಹೆಣ್ಣು ಮಕ್ಕಳನ್ನು ಅಸ್ಪ ೃಶ್ಯರಂತೆ ಕಾಣುವಸಂದರ್ಭದಲ್ಲಿ ವಿಶೇಷವಾಗಿ ಶಾಲೆ ತೆರೆದುಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಕಾರಣರಾದಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ರಾಜ್ಯ ಸರ್ಕಾರಉತ್ತಮ ಶಿಕ್ಷಕ ಪ್ರಶಸ್ತಿ ಘೊಷಣೆ ಮಾಡಬೇಕುಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಪ್ರಾಸ್ತಾವಿಕಮಾತನಾಡಿದರು.

ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿಜಿಲ್ಲೆಗೆಕೀರ್ತಿತಂದವಿದ್ಯಾರ್ಥಿನಿಸ್ನೇಹಾಹಾವೇರಿಅವರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಪುರಸ್ಕೃತ21 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿಗೌರವಿಸಲಾಯಿತು. ನಿವೃತ್ತಿ, ಸ್ವಯಂ ನಿವೃತ್ತಿಹೊಂದಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು ಹಾಗೂಸೇವಾ ನಿರತ ಅಕಾಲಿಕ ಮರಣ ಹೊಂದಿದಶಿಕ್ಷಕರ ಕುಟುಂಬಸ್ಥರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಚ್‌.ಪಾಟೀಲ, ಪ್ರಭಾರಉಪ ನಿರ್ದೇಶಕ ಝಡ್‌.ಎಂ. ಖಾಜಿ, ಪುಷ್ಪಲತಾಬಿದರಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದವಿಜಯೇಂದ್ರ ಯತ್ನಳ್ಳಿ, ಎಸ್‌.ಸಿ. ಕಲ್ಮನಿ, ಎಚ್‌.ಪಿ. ಬಣಕಾರ, ಎಂ.ಬಿ. ರಮೇಶ, ಜಿ.ಆರ್‌.ಭಟ್‌, ಎಂ.ಎಸ್‌. ಕೆಂಚನಗೌಡ್ರ ಸೇರಿದಂತೆಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next