ಶಾಲಾ ಕಾಲೇಜು ದಿನಗಳಲ್ಲಿ ಕೇವಲ ಯಾಂತ್ರಿಕವಾಗಿ ಪಾಠ ಬೋಧಿಸುವ ಶಿಕ್ಷಕರಿಗಿಂತ, ವಿದ್ಯಾರ್ಥಿಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಭವದ ಬಂಧನವನ್ನು ನೀಗಿಸಿ, ವಿದ್ಯಾರ್ಥಿಗಳ ಕಷ್ಟದಲ್ಲಿ ಭಾಗಿಯಾಗಿ ಸಹಾಯಮಾಡುವ ಸ್ನೇಹಿತರಾಗಿ, ಜೀವನದ ನಿಜವಾದ ಮಾರ್ಗ ಕಂಡುಕೊಳ್ಳಲು ಸಹಾಯ ಮಾಡುವ ಮಾರ್ಗದರ್ಶಕರಾಗಿ, ಪ್ರಪಂಚದ ವಿವಿಧ ಆಯಾಮಗಳ ಬಗ್ಗೆ ತಿಳುವಳಿಕೆ ನೀಡುವ ತತ್ವಜ್ಞಾನಿಯಾಗವ ಮೂಲಕ ವಿದ್ಯಾರ್ಥಿ ಜೀವನದಲ್ಲಿ ವಿವಿಧ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.
ಶಿಕ್ಷಕ ಸ್ನೇಹಿತರಾದರೆ ಗೌರವ ತಗ್ಗುವ ಕಾರ್ಯವಲ್ಲ, ಗೌರವವು ಪರಸ್ಪರ ಸಂಪಾದಿಸುವ ಸದ್ಗುಣವಾಗಿರುತ್ತದೆ. ಅಧಿಕಾರಕ್ಕಿಂತ ಸ್ನೇಹದಲ್ಲಿ ಗೌರವ ಬೆಳೆಸುವುದು ಸುಲಭ, ಶ್ರೇಷ್ಠತೆಗಾಗಿ ಗೌರವವನ್ನು ಗೌರವಿಸುವ ಬದಲು ಸ್ನೇಹದಲ್ಲಿ ಪರಸ್ಪರ ಗೌರವ ಸಾಧಿಸುವ ಶಿಕ್ಷಕರ ಪ್ರಭಾವ ಕೇವಲ ತರಗತಿಗೆ ಸೀಮಿತವಾಗದೆ ವಿದ್ಯಾರ್ಥಿಗಳ ಹೊರ ಜೀವನದಲ್ಲಿಯು ಪ್ರಭಾವಿತವಾಗುತ್ತದೆ.
ಯಾವುದೇ ವ್ಯಕ್ತಿಯಾಗಲಿ ತನಗೆ ಬೇಕಾದ ಸಲಹೆ ಸಂದೇಶಗಳನ್ನು ಒಬ್ಬ ಸ್ನೇಹಿತನಿಂದ ಪಡೆಯಲು ಬಯಸುತ್ತಾರೆ. ಹಾಗೆಯೇ ಶಿಕ್ಷಕ ಸ್ನೇಹಿತನಾಗುವ ಮೂಲಕ ಶೈಕ್ಷಣಿಕ ಜೀವನದಲ್ಲಿ ಸಕಾರಾತ್ಮಕ ದೃಷ್ಟಿಕೋನವನ್ನು ನೀಡಿ, ಕಲಿಕೆಯ ಫಲಿತಾಂಶವನ್ನು ಸುಧಾರಿಸುತ್ತರೆ.
ವಿದ್ಯಾರ್ಥಿಗಳಲ್ಲಿನ ಚಿಂತನಶೀಲತೆಯನ್ನು ಬೆಳೆಸಿ, ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಿಗೊಳಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ. ಇದರ ಫಲಿತಾಂಶ ನಮ್ಮ ಜೀವನದ ಪ್ರತಿ ಹೆಜ್ಜೆ, ತೀರ್ಮಾನದಲ್ಲೂ ಪ್ರತಿಫಲಿಸಿ ಉತ್ತಮ ಮಾರ್ಗ ಕಂಡುಕೊಳ್ಳುವಲ್ಲಿ ಸಹಾಯಕವಾಗುತ್ತದೆ.
ತರಗತಿಗಳೆಂದರೆ ವಿಭಿನ್ನ ಮನಸ್ಥಿತಿಯ ವಿದ್ಯಾರ್ಥಿಗಳು ಕಾಣುತ್ತಾರೆ.ಕೇವಲ ವಿದ್ಯಾರ್ಥಿಗಳು ದುರ್ಬಲವಾಗಿರುವ ವಿಷಯ ಮತ್ತು ಕ್ಷೇತ್ರಗಳ ಬಗ್ಗೆ ಪ್ರತಿಕ್ರಿಯಿಸದೆ ಅವರಲ್ಲಿರುವ ಸಾಮರ್ಥ್ಯ, ಆಸಕ್ತಿ ಕ್ಷೇತ್ರಗಳನ್ನು ಅರಿತು ಹುರಿದುಂಬಿಸುವ ಗುಣ ಅವಿಸ್ಮರಣೀಯ.ಇಂತಹ ಶಿಕ್ಷಕರು ಸದೃಢ ಸಮಾಜ ನಿರ್ಮಿಸುವಲ್ಲಿ ಮೌಲ್ಯಯುತವಾದ ಪರಿಶ್ರಮದ ಅಡಿಪಾಯದ ಅಗತ್ಯವನ್ನು ಮಕ್ಕಳಲ್ಲಿ ಮೂಡಿಸಿ, ಬೆಳೆಸುವ ಕಾರ್ಯದೊಂದಿಗೆ, ವಿದ್ಯಾರ್ಥಿಗಳಿಗೆ ನೀತಿಯುತ ಪ್ರಜ್ಞೆ , ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುತ್ತಾರೆ.
ಈ ಶಿಕ್ಷಕರು ಶೇಕ್ಷಣಿಕ ಸಂಸ್ಥೆಗಳಲ್ಲಿ ಬೋಧನೆ ಮಾಡಿದರೆ…ತಪ್ಪು ಮಾಡಿದಾಗ ಪಶ್ಚಾತಾಪ ಪಡುವಂತೆ ಮಾಡುವ ಆತ್ಮಸಾಕ್ಷಿಯ ಅರಿವು , ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಲು ಕಲಿಸುವ ಜೀವನ, ಕಷ್ಟದಲ್ಲಿದ್ದಾಗ ಹೆಗಲಿಗೆ ಹೆಗಲು ಕೊಡುವ ಸ್ನೇಹಿತರು, ಮುಗುಳುನಗುತ್ತಾ ಒಳ ಸಂಚು ರೂಪಿಸುವ ಸಮಯಸಾಧಕರು..ಇವೆರೆಲ್ಲರು ಸಂದರ್ಭಾನುಸಾರ ಬೋಧಿಸುತ್ತಾರೆ.
ಸಚಿನ ಕೋಮಾರ
ಎಸ್ ಡಿ ಎಂ ಕಾಲೇಜ್, ಉಜಿರೆ