Advertisement

ಗುರುಗಳ ಮಾರ್ಗದರ್ಶನ ಅಗತ್ಯ: ಅಪರ ಡಿಸಿ

07:25 AM Sep 12, 2017 | |

ಉಡುಪಿ: ವಿದ್ಯಾರ್ಥಿಗಳ ಗುರಿ ಸಾಕಾರಗೊಳ್ಳಲು ಗುರುಗಳ ಮಾರ್ಗದರ್ಶನ ಅಗತ್ಯ. ಶಿಕ್ಷಕರ ಪಾಠದ ಜತೆಗೆ ಅವರ ವೈಯಕ್ತಿಕ ಜೀವನವೂ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ತಮ್ಮ ಮಾರ್ಗದರ್ಶನದಿಂದ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ. ಅಂತಹಾ ಶಿಕ್ಷಕರನ್ನು ಸಮ್ಮಾನಿಸುವ ಕಾರ್ಯ ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಹೇಳಿದರು. 

Advertisement

ಆದರ್ಶ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ| ಸರ್ವಪಳ್ಳಿ ರಾಧಕೃಷ್ಣನ್‌ ಅವರ ಜಯಂತಿ ಹಾಗೂ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಯ 2017ರ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ, ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರವಿವಾರ ಆದರ್ಶ ಆಸ್ಪತ್ರೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. 

ನಗರಸಭೆಯ ಪೌರಾಯುಕ್ತ ಡಿ. ಮಂಜುನಾಥಯ್ಯ ಮುಖ್ಯ ಅತಿಥಿಯÞಗಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ಮುಖ್ಯೋಪಾಧ್ಯಾಯರಾದ ಕುದಿ ವಸಂತ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಖರ್‌, ಕುಂದಾಪುರ ಶಿಕ್ಷಣಾಧಿಕಾರಿ ಅಶೋಕ ಕಾಮತ್‌, ಆದರ್ಶ ಆಸ್ಪತ್ರೆ ಹಿರಿಯ ನರರೋಗ ಶಸ್ತ್ರ ಚಿಕಿತ್ಸಾ ತಜ್ಞ  ಪ್ರೊ| ಎ. ರಾಜ ಎಂ.ಎಸ್‌., ವಿಮಲಾ ಚಂದ್ರಶೇಖರ್‌ ಉಪಸ್ಥಿತರಿದ್ದರು.  ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್‌. ಚಂದ್ರಶೇಖರ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಶಾಂತ್‌ ಶೆಟ್ಟಿ ಹಾವಂಜೆ ನಿರೂಪಿಸಿ, ಪ್ರಕಾಶ್‌ ಡಿ.ಕೆ. ವಂದಿಸಿದರು. ಜಿಲ್ಲೆಯ 28 ಶಿಕ್ಷಕರಿಗೆ ಅತಿಥಿಗಳು ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಸಮ್ಮಾನಿಸಿದರು.  ಸಮ್ಮಾನಿತ ಶಿಕ್ಷಕರು ಬೈಂದೂರು ವಲಯ: ಎಂ.ವಿ.ಲಮಾಣಿ, ಗೋವಿಂದ ಬಿಲ್ಲವ ಕೆ., ಬಿ.ಮೋಹನ ದಾಸ್‌ ಶೆಟ್ಟಿ, ಜಯಕರ್‌ ಶೆಟ್ಟಿ ಕೆ., ಟಿ. ವೇಣುಗೋಪಾಲ್‌, ಕುಂದಾಪುರ ವಲಯ: ಆನಂದ ಕುಲಾಲ್‌, ಕೆ.ದಿನೇಶ್‌ ಪ್ರಭು, ಸುಮನಾ ಬಾೖ, ಸ್ಟಾನ್ಲಿ ದಿನಮಣಿ, ಪ್ರಶಾಂತ್‌ ಪಿ., ಸುಬ್ರಹ್ಮಣ್ಯ ಎಸ್‌.  ಕಾರ್ಕಳ ವಲಯ: ಶ್ರೀನಿವಾಸ್‌ ಪೈ, ಪ್ರವೀಣ್‌ ಪಿಂಟೋ, ಯೋಗೇಂದ್ರ ನಾಯಕ್‌, ರಮೇಶ್‌ ನಾಯಕ್‌, ಭಗವತಿ ಪ್ರಸನ್ನ, ಲತಾ ಆರ್‌. ಡಿ’ಸೋಜಾ,  ಉಡುಪಿ ವಲಯ: ವಿ. ಕುಸುಮಾವತಿ, ಕೃಷ್ಣ ನಾಯಕ್‌ ಬಿ., ಶಾರದಾ ಎ., ಪ್ರೀತಿ ಕ್ರಾಸ್ಟ್‌ ಎ.ಸಿ. ವಿನ್ನಿ ಡಿಸೋಜ, ವೀರಾ ಫೆರ್ನಾಂಡಿಸ್‌  ಬ್ರಹ್ಮಾವರ ವಲಯ: ಭುಜಂಗ ಬಿ.ಶೆಟ್ಟಿ, ಬಿ.ಬಾಲಗಂಗಾಧರ ಶೆಟ್ಟಿ , ಕೆ,ರಾಜಾರಾಮ್‌ ಐತಾಳ್‌, ಅಸ್ಲಾಮ್‌ ಹೈಕಾಡಿ, ಲಿಖೀತಾ ವಿ. ಕೊಠಾರಿ. 

ಸಂಶೋಧನೆ-ನಿರೀಕ್ಷಿತ ಪ್ರಗತಿಯಾಗಿಲ್ಲ ನಮ್ಮ ದೇಶದಲ್ಲಿ ಬುದ್ಧಿವಂತರಿದ್ದಾರೆ. ಮ್ಯಾನ್‌ಪವರ್‌ಗೆ ಕೊರತೆ ಇಲ್ಲ. ಆದರೆ ಸಂಶೋಧನೆಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಶಿಕ್ಷಕರು ಸಂಶೋಧನೆಗೆ ಮತ್ತಷ್ಟು ಕೊಡುಗೆ ನೀಡಬೇಕು. ಸದೃಡ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ, ಸರ್ವಾಂಗೀಣ ಅಭಿವೃದ್ಧಿಯಾಗಬೇಕು.  
– ಡಾ| ಜಿ.ಎಸ್‌. ಚಂದ್ರಶೇಖರ್‌, ಆದರ್ಶ ಆಸ್ಪತ್ರೆಯ ಎಂಡಿ  

Advertisement

Udayavani is now on Telegram. Click here to join our channel and stay updated with the latest news.

Next