Advertisement

ಶಿಕ್ಷಕರು ಜೀನ್ಸ್‌, ಲೆಗ್ಗಿನ್ಸ್‌ ಧರಿಸುವಂತಿಲ್ಲ !

08:55 PM May 20, 2023 | Team Udayavani |

ದಿಸ್‌ಪುರ್‌: ಅಸ್ಸಾಂನ ಎಲ್ಲ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ರಾಜ್ಯ ಸರ್ಕಾರ ನೂತನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಕರ್ತವ್ಯದ ಸಂದರ್ಭದಲ್ಲಿ ಶಿಕ್ಷಕರು ಜೀನ್ಸ್‌ ಅಥವಾ ಲೆಗ್ಗಿನ್ಸ್‌ ಧರಿಸಿ ಶಾಲೆಗಳಿಗೆ ಹಾಜರಾಗುವಂತಿಲ್ಲ ಎಂದು ಆದೇಶಿಸಲಾಗಿದೆ. ಪುರುಷ ಶಿಕ್ಷಕರು ಶರ್ಟ್‌, ಪ್ಯಾಂಟ್‌ ಧರಿಸಲು ಸೂಚಿಸಲಾಗಿದೆ. ಜೀನ್ಸ್‌, ಕ್ಯಾಶ್ಯುವಲ್ಸ್‌, ಟಿ-ಶರ್ಟ್‌ ಧರಿಸುವಂತಿಲ್ಲ. ಶಿಕ್ಷಕಿಯರು ಸಲ್ವಾರ್‌, ಸೀರೆಯುಟ್ಟು ಬರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿರುವ ಹಿನ್ನೆಲೆ ಕರ್ತವ್ಯನಿರತರಾಗಿರುವಾಗ ಅವರು ಧರಿಸುವ ವಸ್ತ್ರಗಳು ಶಿಸ್ತಿನಿಂದ ಕೂಡಿರುವುದು ಅಗತ್ಯ. ಕೆಲ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ತಮಗಿಷ್ಟ ಬಂದಂತೆ ವಸ್ತ್ರಗಳನ್ನು ಧರಿಸಿದ್ದು, ಆ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹೊಸ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next