ರಾಯಚೂರು: ಮಸ್ಕಿ ಉಪಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕ ಕೋವಿಡ್ ಗೆ ಬಲಿಯಾಗಿದ್ದಾರೆ.
ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಪ್ರೌಢಶಾಲೆಯ ವಿಜ್ಞಾನ ವಿಷಯದ ಶಿಕ್ಷಕ ಕಟ್ಟೆಪ್ಪ (40) ಸಾವನ್ನಪ್ಪಿದವರು. ಸೋಂಕು ತಗುಲಿದ ಹಿನ್ನೆಲೆಯಲ್ಲಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ : ಕೋವಿಡ್ ವಿರುದ್ಧ ಲಸಿಕೆಯೇ ಸುರಕ್ಷಾ ಕವಚ: ಸಿಎಂ ಯಡಿಯೂರಪ್ಪ
ಶಿಕ್ಷಕ ಕಟ್ಟೆಪ್ಪ ಇತ್ತೀಚೆಗೆ ಮಸ್ಕಿ ಉಪಚುನಾವಣೆಯ ಕರ್ತವ್ಯಕ್ಕೆ ಹಾಜರಾಗಿದ್ದರು. ನಂತರ ಅವರಿಗೆ ಕೋವಿಡ್ ಲಕ್ಷಣಗಳು ಕಂಡು ಬಂದಿದ್ದರಿಂದ ಪರೀಕ್ಷೆಗೆ ಒಳಪಟ್ಟಾಗ ಕೋವಿಡ್ ಪಾಸಿಟಿವ್ ದೃಢವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮಹಾಮಾರಿ ಕೋವಿಡ್ ವಿರುದ್ಧ ಹೋರಾಟ ನಡೆಸಿ ಸಾವನ್ನಪ್ಪಿದ್ದಾರೆ.
ಚುನಾವಣೆಯಲ್ಲಿ ಕರ್ತವ್ಯ ನಿಭಾಯಿಸಿದ ಇತರರಿಗೂ ಸದ್ಯ ಕೋವಿಡ್ ಭೀತಿ ಕಾಡುತ್ತಿದೆ. ದೇವದುರ್ಗ ತಾಲೂಕಿನಲ್ಲಿ ಆತಂಕ ಮನೆ ಮಾಡಿದೆ.