ಚಿತ್ರದುರ್ಗ (ಭರಮಸಾಗರ): ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಶಿಕ್ಷಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ನಂದಿಹಳ್ಳಿ ಬಳಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಬಹದ್ದೂರ್ ಘಟ್ಟ ಗ್ರಾಮದ ಕಲ್ಲಮ್ಮ ಪ್ರೌಢಶಾಲೆ ಶಿಕ್ಷಕ ಪ್ರದೀಪ್ (40) ಮೃತ ಶಿಕ್ಷಕ.
ಶನಿವಾರದ ಶಾಲಾ ಕರ್ತವ್ಯಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಂದಿಹಳ್ಳಿ ಬಳಿ ಎದುರು ಬರುತ್ತಿದ್ದ ಶಾಲಾ ವಾಹನಕ್ಕೆ ಢಿಕ್ಕಿ ಆಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಿರಿಗೆರೆ ತರಳಬಾಳು ಬೃಹನ್ಮಠದ ಆಡಳಿತಾಧಿಕಾರಿ ನಿಜಲಿಂಗಪ್ಪನವರ ಪುತ್ರರಾಗಿದ್ದ ಪ್ರದೀಪ್ ಈ ಹಿಂದೆ ಬಿದರಕೆರೆ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಎರಡು ವರ್ಷಗಳ ಹಿಂದೆ ಬಹದ್ದೂರ್ ಘಟ್ಟ ಪ್ರೌಢಶಾಲೆಗೆ ವರ್ಗಾವಣೆ ಆಗಿ ಬಂದಿದ್ದರು.
Related Articles
ಬಹದ್ದೂರ್ ಘಟ್ಟ ಗ್ರಾಮದ ಶಾಲಾ ಆಡಳಿತ ಮಂಡಳಿ, ಗುರುವೃಂದ , ಬಹದ್ದೂರ್ ಘಟ್ಟ ಗ್ರಾಮಸ್ಥರು, ವಿದ್ಯಾರ್ಥಿಗಳು ಸೇರಿದಂತೆ ಅವರ ಅಪಾರ ಸ್ನೇಹಿತರು ಶಿಕ್ಷಕರು ಪ್ರದೀಪ್ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.