Advertisement

ಬಾಲಕಿ ಮೇಲೆ ಅತ್ಯಾಚಾರ: ಸಂಗೀತ ಶಿಕ್ಷಕನಿಗೆ ಕಠಿನ ಜೈಲು ಶಿಕ್ಷೆ

11:51 AM Mar 17, 2018 | udayavani editorial |

ಥಾಣೆ, ಮಹಾರಾಷ್ಟ್ರ : 2016ರಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 30ರ ಹರೆಯದ ಸಂಗೀತ ಶಿಕ್ಷಕನಿಗೆ ಇಲ್ಲಿನ ನ್ಯಾಯಾಲಯ 3 ವರ್ಷಗಳ ಕಠಿನ ಜೈಲು ಶಿಕ್ಷೆಯನ್ನು ವಿಧಿಸಿದೆ.

Advertisement

ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದ ಹೆಚ್ಚುವರಿ ಸೆಶನ್ಸ್‌ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ ಎಸ್‌ ಭಾಯಿಸಾರೆ ಅವರು ಲೈಂಗಿಕ ದೌರ್ಜನ್ಯದ ಅಪರಾಧಿ ಸಂಗೀತ ಶಿಕ್ಷಕನಿಗೆ 1,500 ರೂ. ದಂಡವನ್ನೂ ವಿಧಿಸಿದರು. 

ಸಂಜಯ್‌ ಪಾಟೀಲ್‌ ಎಂಬ ಹೆಸರಿನ ಆರೋಪಿ ಸಂಗೀತ ಶಿಕ್ಷಕನು ಮಾಜಿವಾಡಾದ ನಿವಾಸಿಯಾಗಿದ್ದಾನೆ.ಈತ ತನ್ನದೆ ಸಂಗೀತ ಶಾಲೆಯನ್ನು ನಡೆಸುತ್ತಾ ವೃಂದಾವನ ಸೊಸೈಟಿಯ ವಿದ್ಯಾಲಯದಲ್ಲಿ ಸಂಗೀತ ತರಗತಿ ನಡೆಸುತ್ತಿದ್ದ ಎಂದು ಅಡಿಶನಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶಿಲ್ಪಾ ತಲಹಾರ್‌ ಕೋರ್ಟಿಗೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next