Advertisement

ಶಿಕ್ಷಕ ಪರೀಕ್ಷೆ: ಫ‌ಲಿತಾಂಶ ಪ್ರಕಟ: 54,342 ಮಂದಿ ತೇರ್ಗಡೆ

12:27 AM Aug 18, 2022 | Team Udayavani |

ಬೆಂಗಳೂರು: ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 6ರಿಂದ 8ನೇ ತರಗತಿ ಬೋಧನೆಗಾಗಿ ಮೇ ತಿಂಗಳಿನಲ್ಲಿ ನಡೆಸಿದ ಪದವೀಧರ ಶಿಕ್ಷಕರ ನೇಮಕಾತಿ (ಜಿಪಿಟಿಆರ್‌-2022) ಪರೀಕ್ಷೆಯ ಫ‌ಲಿತಾಂಶ ಪ್ರಕಟವಾಗಿದ್ದು, 54 ಸಾವಿರ ಅಭ್ಯರ್ಥಿಗಳು ಅರ್ಹರಾಗಿದ್ದಾರೆ.

Advertisement

15 ಸಾವಿರ ಹುದ್ದೆಗಳಿಗೆ 1,16,223 ಮಂದಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 74,923 ಮಂದಿ ಹಾಜ ರಾಗಿದ್ದರು. ಈ ಪೈಕಿ 54,342 ಮಂದಿ ಅರ್ಹರಾಗಿದ್ದಾರೆ. ಅರ್ಹರಲ್ಲಿ “ರೋಸ್ಟರ್‌, ವಿಷಯವಾರು ಮತ್ತು ಜಿಲ್ಲಾ
ವಾರು’ ಮಾನದಂಡಗಳನ್ನು ಪರಿಗಣಿಸಿ 15 ಸಾವಿರ ಶಿಕ್ಷಕ ರನ್ನು ನೇಮಿಸಿಕೊಳ್ಳಲಾಗುತ್ತದೆ. ಮುಂದಿನ 2ರಿಂದ 3 ದಿನಗಳಲ್ಲಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ ಡಾ| ಆರ್‌. ವಿಶಾಲ್‌ ತಿಳಿಸಿದ್ದಾರೆ.

2017ರಲ್ಲಿ 10 ಸಾವಿರ ಹುದ್ದೆಗಳಿಗೆ 3,389 ಮತ್ತು 2019ರಲ್ಲಿ 10,565 ಹುದ್ದೆಗಳಿಗೆ 1,994 ಮಂದಿಯಷ್ಟೇ ಅರ್ಹತೆ ಹೊಂದಿದ್ದರು. ಈ ಬಾರಿ 54 ಸಾವಿರ ಮಂದಿ ಸಿಇಟಿಯಲ್ಲಿ ಅರ್ಹತೆ ಹೊಂದಿರುವುದರಿಂದ 15 ಸಾವಿರ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ನಿರೀಕ್ಷೆ ಹೊಂದಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

61 ಮಂದಿಯ ಫ‌ಲಿತಾಂಶ ತಡೆ
ಪರೀಕ್ಷಾ ನಿಯಮ ಉಲ್ಲಂಘನೆ ಹಾಗೂ ಇತರ ಕಾರಣಗಳಿಂದ 61 ಅಭ್ಯರ್ಥಿಗಳ ಫ‌ಲಿತಾಂಶವನ್ನು ತಡೆಹಿಡಿಯಲಾಗಿದ್ದು, ಇಬ್ಬರನ್ನು ಅನರ್ಹಗೊಳಿಸಲಾಗಿದೆ. ಇಲಾಖೆಯ ವೆಬ್‌ಸೈಟ್‌
//www.schooleducation.kar.nic.in ನಲ್ಲಿ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ದಾಖಲಿಸಿ ಫ‌ಲಿತಾಂಶ ವೀಕ್ಷಿಸಬಹುದು.

24ರ ವರೆಗೆ ದಾಖಲಾತಿ
ತಿದ್ದುಪಡಿಗೆ ಅವಕಾಶ
ಅಭ್ಯರ್ಥಿಗಳ ದಾಖಲಾತಿ ತಿದ್ದುಪಡಿಗೆ ಮತ್ತೂಂದು ಅವಕಾಶ ಕಲ್ಪಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಅಂಕ ಮತ್ತು ಮೀಸಲಾತಿ ವಿವರಗಳನ್ನು ಹೊರತುಪಡಿಸಿ, ವೈಯಕ್ತಿಕ ವಿವರಗಳಾದ ಅಭ್ಯರ್ಥಿಯ ಹೆಸರು, ಹೆತ್ತವರ ಹೆಸರು, ಜನ್ಮ ದಿನಾಂಕ, ಪದವಿ, ಬಿಇಡಿ, ಡಿಎಲ್‌ಇಡಿ ಮತ್ತು ಟಿಇಟಿ ಅಂಕಗಳಿಗೆ ಸಂಬಂಧ ದಾಖಲಿಸಿರುವ ಮಾಹಿತಿ ತಪ್ಪಾಗಿದ್ದಲ್ಲಿ ಆ.18ರಿಂದ 24ರ ವರೆಗೆ ತಿದ್ದುಪಡಿಗೆ ಅವಕಾಶ ನೀಡಿದೆ. ತಿದ್ದುಪಡಿ ಅಗತ್ಯವಿರುವ ಅಭ್ಯರ್ಥಿಗಳು ಮಾತ್ರ ತಮ್ಮ ಮನವಿಯನ್ನು ಅಗತ್ಯ ದೃಢೀಕೃತ ಪ್ರಮಾಣ ಪತ್ರಗಳೊಂದಿಗೆ ವಿಶೇಷಾಧಿಕಾರಿ, ಕೇಂದ್ರೀಯ ದಾಖಲಾತಿ ಘಟಕ, ಕೆ.ಜಿ.ರಸ್ತೆ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಸಲ್ಲಿಸಬಹುದು ಎಂದು ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next