ರಬಕವಿ-ಬನಹಟ್ಟಿ: 12ರೂಪಾಯಿಗೆ ಟಿ-ಕಾಫಿ ಸಿಗದ ಈ ಕಾಲದಲ್ಲಿ ಇಲ್ಲಿನ ಅಮ್ಮ ಫೌಂಡೇಶನ್ ಬನಹಟ್ಟಿಯ ಮಂಗಳವಾರ ಪೇಟೆಯ ಈಶ್ವರಲಿಂಗ ಮೈದಾನ ಹತ್ತಿರವಿರುವ ಊಟದ ಮನೆಯಲ್ಲಿ ಕೇವಲ 12 ರೂ.ಗಳಲ್ಲಿ ಬಡವರ, ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ.
Advertisement
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಬಿಸಿ ಬಿಸಿ ಜುನಕಾ, ಬಿಸಿ ರೊಟ್ಟಿ ನೀಡುವ ಕಾಯಕದಲ್ಲಿ ನಿರತವಾಗಿದೆ. ಚಿಕ್ಕಪಡಸಲಗಿಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ವಿಜ್ಞಾನ ವಿಷಯದ ಶಿಕ್ಷಕರಾಗಿರುವ ಬಸವರಾಜ ಜಾಲೋಜಿ ಯಾವುದೇ ಅಪೇಕ್ಷೆಯಿಲ್ಲದೆ, ಮತ್ತೊಬ್ಬರ ಸಹಾಯ- ಸಹಕಾರವಿಲ್ಲದೆ ಇಂತಹ ಮಹತ್ವದ ಕಾರ್ಯದಲ್ಲಿ ತೊಡಗಿದ್ದಾರೆ.
Related Articles
ಮನೆ ಸಂಜೀವಿನಿಯಾಗಿದೆ. ಇಂದಿನ ದಿನಮಾನದಲ್ಲಿಕೇವಲ 12 ರೂ.ಗೆ ದಿನಂಪ್ರತಿ 2 ರೊಟ್ಟಿ ಜತೆಗೆ ಸಾಕಾಗುವಷ್ಟು ಜುನುಕಾ ಒದಗಿಸುತ್ತಿರುವುದು ವಿಶೇಷ.
Advertisement
ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ 12ರೂ.ಗೆ ರೊಟ್ಟಿ ಊಟ ನೀಡಲಾಗುತ್ತಿದೆ. ಎಲ್ಲಿಯವರೆಗೂ ಆ ದೇವರು ಶಕ್ತಿ ನೀಡುತ್ತಾನೋ, ಅಲ್ಲಿಯವರೆಗೂ ಈ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇನೆ.’ಬಸವರಾಜ ಜಾಲೋಜಿ,ಶಿಕ್ಷಕ,
ಅಮ್ಮಾ ಫೌಂಡೇಶನ್ ಸಂಸ್ಥಾಪಕ, ಬನಹಟ್ಟಿ ಕಳೆದೆರಡು ವರ್ಷಗಳಿಂದ ಇಲ್ಲಿಯೇ ನಿತ್ಯ ಊಟ ಮಾಡುತ್ತೇನೆ. ನಿತ್ಯ 80 ರಿಂದ 100 ರೂ. ಸಂಪಾದಿಸುತ್ತೇನೆ. ಕಡಿಮೆ ದರದಲ್ಲಿ ನಿತ್ಯ ಊಟ ದೊರಕುತ್ತಿರುವುದು ನನ್ನ ಪುಣ್ಯ.
ಗುರಪಾದ ತಳವಾರ, ಕೂಲಿ ಕಾರ್ಮಿಕ. ವೇತನ ಅಷ್ಟಕಷ್ಟೇಯಿದ್ದರೂ ಬಡವರಿಗೆ ಊಟ ಒದಗಿಸುವದರಲ್ಲಿ ತೃಪ್ತಿ ಇದೆ. ನಿರಂತರ ಸೇವೆಯಲ್ಲಿ ನೆಮ್ಮದಿಯಿದೆ.
ವಾಸಂತಿ ಮಠಪತಿ, ಅಡುಗೆ ತಯಾರಕರು. ■ ಕಿರಣ ಶ್ರೀಶೈಲ ಆಳಗಿ