ಕೊಪ್ಪಳ: ಮಕ್ಕಳು, ಮಹಿಳೆಯರ ಜೊತೆ ಕಾಮದಾಟ ಆಡಿ ತಲೆ ಮರೆಸಿಕೊಂಡಿದ್ದ ಶಿಕ್ಷಕ ಅಜರುದ್ದೀನ್ ಕೊನೆಗೂ ಪೊಲೀಸರಿಗೆ ಬಲೆಗೆ ಬಿದ್ದಿದ್ದಾನೆ.
ಕಾರಟಗಿ ಪೊಲೀಸರು ಗೋವಾ ಸಮೀಪ ಅಜರುದ್ದೀನ್ ನನ್ನು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ. ಶಿಕ್ಷಕ ಅಜರುದ್ದೀನ್ ವಿರುದ್ಧ ಕೊಪ್ಪಳ ಜಿಲ್ಲೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಾಗುತ್ತಲೇ ಎಸ್ ಪಿ ಅರುಣಾಂಗ್ಷು ಗಿರಿ ಅವರು ತನಿಖೆಗಾಗಿ ತಂಡ ರಚನೆ ಮಾಡಿದ್ದರು. ಮಕ್ಕಳು, ಮಹಿಳೆಯರೊಂದಿಗೆ ವಿಕೃತಿ ಮೆರೆದು ವಿಡಿಯೋ ಮಾಡಿಕೊಂಡಿದ್ದ ಕಾಮುಕ ಶಿಕ್ಷಕ ಅಜರುದ್ದೀನ್ ವರ್ತನೆಗೆ ಸಾಕಷ್ಟು ಆಕ್ರೋಶ ಕೇಳಿ ಬಂದಿತ್ತು.
ಆರೋಪಿ ಅಜರುದ್ದೀನ್ ಸಿಂಧನೂರು ತಾಲೂಕಿನ ಸಿಂಗಾಪೂರ ಸರಕಾರಿ ಶಾಲೆಯ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದನು. ವಿಡಿಯೋ ವೈರಲ್ ಆಗುತ್ತಲೇ ನಾಪತ್ತೆಯಾಗಿದ್ದ ಶಿಕ್ಷಕನ ಬಂಧನಕ್ಕೆ ಬಲೆ ಬಿಸಲಾಗಿತ್ತು.
Related Articles
ಇದನ್ನೂ ಓದಿ:‘ನನಗೆ ತೀರ್ಪು ಇಷ್ಟವಾಗದಿದ್ದರೂ…’: ಸುಪ್ರೀಂ ಆದೇಶದ ಬಗ್ಗೆ ಕಾನೂನು ಸಚಿವರ ಪ್ರತಿಕ್ರಿಯೆ
ಸಿಂಧನೂರಿನಲ್ಲಿ ಶಾಲೆಯಲ್ಲಿ ಕರ್ತವ್ಯ, ಕಾರಟಗಿಯಲ್ಲಿ ಮನೆ ಮಾಡಿಕೊಂಡಿದ್ದ ಅಜರುದ್ದೀನ್ ಅಮಾಯಕ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಈ ಕುರಿತಂತೆ ಶನಿವಾರ ಕಾರಟಗಿ ಪೊಲೀಸ್ ಠಾಣೆಯಲ್ಲಿ ನೊಂದ ಮಹಿಳೆ ದೂರು ನೀಡಿದ್ದರು. ದೂರು ದಾಖಲಾದ ಬೆನ್ನಲ್ಲೆ ವಿಶೇಷ ತನಿಖಾ ತಂಡ ಗೋವಾ ಸಮೀಪ ಇರುವುದನ್ನು ಒತ್ತೆ ಮಾಡಿ ಆತನನ್ನು ಭಾನುವಾರ ಬಂಧಿಸಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ಮೂಲದಿಂದ ತಿಳಿದು ಬಂದಿದೆ.