ಮಣಿಪಾಲ: ಅನರ್ಹ ಶಾಸಕರ ಸ್ಪರ್ಧೆಯಿಂದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸಲು ಯಶಸ್ವಿಯಾಗುವುದೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಕೆಲವು ಇಲ್ಲಿವೆ.
ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಬಹುಮತ ಸಾಬೀತು ಪಡಿಸಲಿದೆ. ಎಲ್ಲಾ 17 ಅನರ್ಹ ಶಾಸಕರು ಗೆಲ್ಲದಿದ್ದರು 8 ರಿಂದ 9 ಜನ ಗೆಲ್ಲಬಹುದು. ಆದರೆ ಅವರನ್ನೆಲ್ಲ ಮಂತ್ರಿ ಮಾಡಿ ಮೂಲ ಬಿಜೆಪಿ ಶಾಸಕರನ್ನು ಸಮಾಧಾನ ಮಾಡಿ ಉಳಿದ ಅವಧಿ ಪೂರೈಸೋದು ಸ್ವಲ್ಪ ಕಷ್ಟವೇ. ಆದರೂ ಅನುಭವಿ ಯಡಿಯೂರಪ್ಪ ನವರು ಸುಮ್ಮನೆ ಕೂರುವಂತಹವರಲ್ಲ.
ಸಂತೋಷ್ ಹೆಚ್ ಡಿಸೋಜಾ: ಖಂಡಿತಾ ಇಲ್ಲ. ಯಾಕೆಂದರೆ ಎಲ್ಲ ಶಾಸಕರು ಗೆದ್ದರೆ ಅಷ್ಟೇ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕು. ಇದರಿಂದಾಗಿ ಬಿಜೆಪಿ ಪಕ್ಷದ ನಿಷ್ಠಾವಂತ ಶಾಸಕರು ರಾಜೀನಾಮೆ ಕೊಡುವುದು ಖಚಿತ. ಇತೀಚಿನ ಕೋರ್ಟ್ ತೀರ್ಪು ಕೂಡ ಪಕ್ಷದಿಂದ ಪಕ್ಷಕ್ಕೆ ಹೋಗುವವರಿಗೆ ಸಹಕಾರಿಯಾಗಿದೆ. ಮತ್ತೊಂದು ಪಕ್ಷದಿಂದ ಸ್ಪರ್ಧೆ ಮಾಡಬಹುದು.
ಸೈಲೂ ಸೆರಾವೋ: ಅನಾರ್ಹರನ್ನು ಪುನಃ ಅನಾರ್ಹರನ್ನಾಗಿ ಮಾಡುವುದೇ ನಿಜವಾದ ಮತದಾರ.ಇವರ ಬಗ್ಗೆ ಮತದಾರರಿಗೆ ಬುದ್ದಿ ಇದೆ ಎಂಬುದು ನನ್ನ ಭಾವನೆ.
ಇಸ್ಮೈಲ್ ಕೆ: ಖಂಡಿತಾ ಅಸಾದ್ಯ. ಕರ್ನಾಟಕದ ಜನರು ಮೂರ್ಖರಲ್ಲ. ಆಪರೇಶನ್ ಕಮಲ ಆದ ಮುಂಬಾಯಿ ಹಾಗು ಗುಜರಾತ್ ನಲ್ಲಿ ಅದೂ ಘಟಾನುಘಟಿಗಲು ಸೊಲುಂಡದ್ದು ಕರ್ನಾಟಕದ ಮತದಾರರು ಮರೆತಿಲ್ಲ.
ವಿಜಯ್ ಕುಮಾರ್ ಸುರತ್ಕಲ್: ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಕೇಂದ್ರ ಸರಕಾರಕ್ಕೆ , ಸ್ಪೀಕರ್ ರಮೇಶ್ ಕುಮಾರ್ ಕೊಟ್ಟ ತೀರ್ಪನ್ನು ನ್ಯಾಯ ಬದ್ಧಗೊಳಿಸಲು ಸಂಸತ್ತಿನಲ್ಲಿ ಒಂದು ಕಾನೂನು ಜಾರಿಗೊಳಿಸಲು ಸಲಹೆ ನೀಡ ಬಹುದಿತ್ತು. ಆಗ ರಾಜಕೀಯದ ಕುದುರೆ ವ್ಯಾಪಾರಕ್ಕೆ ಬ್ರೇಕ್ ಬೀಳುತಿತ್ತು. ಆದರೆ ಯಾವ ಪಕ್ಷಕ್ಕೂ ಇದು ಬೇಕಿಲ್ಲ. ಹೀಗಾದರೆ ಹಣ ಆಮಿಷಗಳಿಂದ ರಾಜಕೀಯವನ್ನು ಶುದ್ಧ ಗೊಳಿಸುವುದಾದರು ಹೇಗೆ?. ಕೇವಲ ರಸ್ತೆ ಕಸ ಗುಡಿಸಿದರೆ ಸಾಲದು. ರಾಜಕೀಯ ಶುದ್ಧವಾದಾಗ ಮಾತ್ರ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾದೀತು.
ರೋಹಿಂದ್ರನಾಥ್ ಕೋಡಿಕಲ್; ಈಗಿನ ರಾಜಕೀಯ ವಾತಾವರಣ ನೋಡಿದರೆ ನೈತಿಕತೆಗೆ ನಾವು ತಿಲಾಂಜಲಿ ನೀಡಿದೇವೆ. ನಾವು ಹೇಗೆ ಇದ್ದೇವೆ ಹಾಗೇ ಸಮಾಜ ಇರುತ್ತದೆ. ಅನರ್ಹರು ಅರ್ಹ ರಾಗುವುದು ಬಹು ಸುಲಭ
ಕಲಂದರ್ ಶಾ: ಖಂಡಿತ ಸಾಧ್ಯವಿಲ್ಲ ಪ್ರಜಾಪ್ರಭುತ್ವ ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಅಲ್ಲಾಡಿಸುವವರು ಖಂಡಿತ ಜಯಿಸಲ್ಲ