Advertisement
ಕೆ ಎಸ್ ಕೃಷ್ಣ; ಒಬ್ಬೂಬರದು ಒಂದ್ದೊಂದು ರೀತಿಯ ಸಿದ್ದಾಂತ, ಎತ್ತು ಎರಿಗೇಳೆದರೆ ಕೋಣ ನೀರಿಗೆ ಇಳಿದಂತೆ, ಆದ್ದರಿಂದ 5 ವರ್ಷ ಆಡಳಿತ ತುಂಬಾ ತುಂಬಾ ಅಸಾಧ್ಯ
Related Articles
Advertisement
ವಾದಿರಾಜ ತಂತ್ರಿ: ಐದು ವರ್ಷ ಸರ್ಕಾರ ಇರುವುದು ಕಷ್ಟ ಇದೆ. ಏಕೆಂದರೆ ಉದ್ಧವ್ ಠಾಕ್ರೆ ಯಶಸ್ವಿ ಜನಪ್ರಿಯ ಆದ್ರೆ ಪವಾರ್ ಮತ್ತು ಕಾಂಗ್ರೆಸ್ ಗೆ ಮುಂದೆ ಬೆಳೆಯಲು ಕಷ್ಟ ಇರುವುದರಿಂದ ಅವರು ಬೆಳೆಯುವ ಲಕ್ಷಣಗಳು ಕಂಡರೆ ಅಲ್ಲಿಗೆ ಮುಳುಗಿಸುವ ಸಾದ್ಯತೆ ಇದೆ.ಮತ್ತು ಮರಾಠ ಮೀಸಲಾತಿ 80 ಘೋಷಣೆ ಉಳಿದ ರಾಜ್ಯದ ಜೊತೆ ಸಂಘರ್ಷ ಸಾಧ್ಯತೆ ಇದೆ.
ಮಾಸ್ತಿ ನಾಯಕ್: ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಿದ ಬಿಜೆಪಿ ಚಾಳಿ ಅಲ್ಲಿ ಮುಂದುವರೆಯದಿದ್ದರೆ ಗ್ಯಾರಂಟಿ ಮಹಾರಾಷ್ಟ್ರದ ಮೈತ್ರಿ ಸರಕಾರ 5 ವರ್ಷಗಳ ಕಾಲ ಪೂರ್ಣ ಆಡಳಿತ ನಡೆಸಿ ಮುಂದೆ ಮತ್ತೆ ಅಧಿಕಾರಕ್ಕೂ ಬರುತ್ತದೆ . ಈ ಬಿಜೆಪಿ ಮಂದಿಗೆ ಅಧಿಕಾರ ಇಲ್ಲಾ ಅಂದ್ರೆ ಅವರಹತ್ತಿರ ಸರಿಯಾಗಿ ಉಸಿರಾಡಲೂ ಕೂಡ ಆಗೊದಿಲ್ಲ ಅನ್ನೊದು ಗ್ಯಾರಂಟಿ ಆಗಿದೆ .
ಸುರೇಶ್: ಜಗಳ ಆಡದೇ ಉತ್ತಮ ವಾದ ಆಡಳಿತ ಕೊಟ್ಟರೆ ಖಂಡಿತ ಇರುತ್ತದೆ. ಇಲ್ಲ ಅಂದರೆ ಜಿಂತಾತ ಜಿಂತಾತನೇ.
ಬಸವರಾಜ ಮಸೊತಿ; ಶಿವಸೇನಾ ಪಕ್ಷದ ತತ್ವ ಸಿದ್ಧಾಂತಗಳು ಅರಬಿ ಸಮುದ್ರದ ಪಾಲಾಯಿತು.ಬೆಳಗಾಂವಿ ಮರಾಠಿಗರ ಮೇಲೆ ರಾಜಕೀಯ ಮಾಡುವ ಶಿವಸೇನಾ ಗಡಿವಿವಾದ ಬಗೆಹರಿಸಲು ಮುಂದಾಗಬೇಕು. ಶರದ ಪವಾರ ಯಾವಾಗ ಸರ್ಕಾರ ಬಿಳಿಸುತ್ತಾರೆ ತಿಳಿಯುವುದಿಲ್ಲ.
ನಿತ್ಯಾನಂದ ಬ್ರಹ್ಮಾವರ್;ಆರೇ ತಿಂಗಳಲ್ಲಿ ಹಲವಾರು ವಿಷಯಗಳಲ್ಲಿ ಭಿನ್ನಮತದಿಂದಾಗಿ “ಹಿಂದೂ ಸಿದ್ಧಾಂತ” ಕೈ ಬಿಡಲು ಸಾಧ್ಯವಿಲ್ಲ ಎಂಬ ನೆಪದಿಂದ ಮತ್ತೆ ಎನ್ ಡಿಎಗೆ ವಾಪಾಸಾಗದಲಿದೆ ಶಿವಸೇನೆ.