Advertisement

ಟೀ ಸ್ಟಾಲ್‌ಗೆ ಸುಧಾಮೂರ್ತಿ ಅಮ್ಮ ಎಂದು ಹೆಸರು : ಮಾಲೀಕನಿಗೆ ಕರೆ ಮಾಡಿದ ಸುಧಾಮೂರ್ತಿ

02:29 PM Sep 17, 2020 | sudhir |

ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮದ ಸುನೀಲ್‌ಕುಮಾರ್‌ ಎಂಬುವರು ಪಟ್ಟಣದಕೊಲ್ಲಿ ವೃತ್ತದ ಬಳಿ ಆರಂಭಿಸಿರುವ ಟೀ ಸ್ಟಾಲ್‌ಗೆ ಸುಧಾಮೂರ್ತಿಅಮ್ಮಎಂಬ ನಾಮಫ‌ಲಕ ಅಳವಡಿಸಿದ್ದಾರೆ. ಇದನ್ನು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ತಮ್ಮ ಫೇಸ್‌ ಬುಕ್ ‌ಖಾತೆಯಲ್ಲಿ ಬರೆದುಕೊಂಡಿದ್ದರು.

Advertisement

ಆ.26ರಂದು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಸುಧಾಮೂರ್ತಿ ಅಮ್ಮನವರ ನಾಮಫ‌ಲಕ ಸಚಿವರ ಗಮನಸೆಳೆದು, ಟೀ ಸ್ಟಾಲ್‌ಗೆ ಭೇಟಿ ನೀಡಿ ಮಾಲೀಕರೊಂದಿಗೆ ಕುಶಲೋಪರಿ ವಿಚಾರಿಸಿ ಬಳಿಕ ಬೆಂಗಳೂರಿಗೆ ತೆರಳಿದ್ದರೆನ್ನಲಾಗಿದೆ.

ಟೀ ಸ್ಟಾಲ್‌ ಮಾಲೀಕ ಸುನೀಲ್‌ ಕುಮಾರ್‌ ಹಾಗೂ ಸಹೋದರರು ಸುಧಾಮೂರ್ತಿ ಅವರನ್ನು ನೇರವಾಗಿ ಕಂಡಿಲ್ಲ ಹಾಗೂ ಯಾವುದೇ ನೆರವು ಪಡೆಯದಿದ್ದರೂ, ಸುಧಾಮೂರ್ತಿ ಅವರ ನಾಮಫ‌ಲಕಗಳನ್ನು ಅಳವಡಿಸಿರುವುದನ್ನು ಇದೇ ಪ್ರಥಮ ಬಾರಿಗೆ ನೋಡಿರುವುದಾಗಿ ತಮ್ಮ ಫೇಸ್‌ಬುಕ್‌ ನಲ್ಲಿ ಬರೆದು ಪ್ರಕಟಿಸಿದ್ದಾರೆ.

ಇದನ್ನೂ ಓದಿ : ಹಳೆ ವೈಷಮ್ಯ : ಟೊಮೇಟೊ ತೋಟಕ್ಕೆ ಕಳೆನಾಶಕ ಸಿಂಪಡಿಸಿದ ದುಷ್ಕರ್ಮಿಗಳು! 9000 ಸಸಿ ನಾಶ

Advertisement

ಮಾಲೀಕನಿಗೆ ಸುಧಾಮೂರ್ತಿ ಕರೆ:
ಶಿಕ್ಷಣ ಸಚಿವರು ಪ್ರಕಟಿಸಿದ ಫೇಸ್‌ ಬುಕ್‌ ಬರಹ ಹಾಗೂ ನಾಮಫ‌ಲಕದ ಭಾವಚಿತ್ರಕ್ಕೆ ಜನರು ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸದರಿ ವಿಚಾರವು ಸುಧಾಮೂರ್ತಿ ಅವರ ಗಮನಕ್ಕೆ ಬಂದು ಟೀ ಸ್ಟಾಲ್‌ ಮಾಲೀಕ ಗೆಜ್ಜಲಗೆರೆಯ ಸುನೀಲ್‌ಕುಮಾರ್‌ ಅವರಿಗೆ ಖುದ್ದು ದೂರವಾಣಿ ಕರೆ ಮಾಡಿದ್ದಾರೆ.

ದೂರವಾಣಿಯಲ್ಲಿ ಮಾತನಾಡಿದ ಶ್ರೀಮತಿ ಸುಧಾಮೂರ್ತಿ, ತಮ್ಮ ಹೆಸರಿನ ನಾಮಫ‌ಲಕವನ್ನು ಟೀ ಸ್ಟಾಲ್‌ ಅಂಗಡಿಗೆ ಅಳವಡಿಸಲು ಕಾರಣವೇ ನೆಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸುನೀಲ್‌ ಕುಮಾರ್‌ಮಾತನಾಡಿ,ಸಮಾಜಮುಖೀ ಕಾರ್ಯಗಳೇ ನಮಗೆ ಪ್ರೇರಣೆಯಾಗಿದೆ. ನೆರೆ ಪರಿಹಾರ, ಸಂತ್ರಸ್ತರಿಗೆ ಮನೆ ನಿರ್ಮಾಣ, ಕೋವಿಡ್‌-19 ಸಂದರ್ಭದಲ್ಲಿ ಸಿಎಂ ಪರಿಹಾರ ನಿಧಿಗೆ ನೆರವು ಇನ್ನಿತರ ಕಾರ್ಯಗಳೇ ತಮಗೆ ಸ್ಫೂರ್ತಿಯಾದ್ದರಿಂದ ಅಂಗಡಿಗೆ ತಮ್ಮಹೆಸರನ್ನು ಅಳವಡಿಸಿರುವುದಾಗಿ ತಿಳಿಸಿದ್ದಾರೆ.

ಕೋವಿಡ್‌-19 ನಿಯಂತ್ರಣಕ್ಕೆ ಬಂದ ಬಳಿಕ ತಮ್ಮ ಅಂಗಡಿಗೆ ಭೇಟಿ ನೀಡುವುದಾಗಿ ಸುಧಾಮೂರ್ತಿ ಅವರು ಭರವಸೆನೀಡಿರುವುದು ಸಾಮಾಜಿಕಜಾಲ ತಾಣದಲ್ಲಿ ಹರಿದಾಡಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next