Advertisement

ಟಿಸಿಎಸ್‌ ವಿರುದ್ಧದ ಕೇಸ್‌ ಗೆದ್ದ ಮಾಜಿ ಉದ್ಯೋಗಿ: ಕಳೆದುಕೊಂಡ ಕೆಲಸ ಮತ್ತೆ ಸಿಕ್ಕಿತು

09:00 AM Jun 19, 2022 | Team Udayavani |

ಚೆನ್ನೈ: ಪ್ರಸಿದ್ಧ ಐಟಿ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌(ಟಿಸಿಎಸ್‌)ನಲ್ಲಿ ಕೆಲಸದಿಂದ ತೆಗೆದುಹಾಕಲಾಗಿದ್ದ ಇಂಜಿನಿಯರ್‌ ಒಬ್ಬರು ಬರೋಬ್ಬರಿ 7 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಡಿ ಇದೀಗ ಮತ್ತೆ ಕೆಲಸ ಗಿಟ್ಟಿಸಿಕೊಂಡಿದ್ದಾರೆ.

Advertisement

ತಮಿಳುನಾಡಿನ ತಿರುಮಲೈ ಸೆಲ್ವನ್‌ 2015ರವರೆಗೆ ಒಟ್ಟು 8 ವರ್ಷಗಳ ಕಾಲ ಟಿಸಿಎಸ್‌ನಲ್ಲಿ ಕೆಲಸ ಮಾಡಿದ್ದರು. ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದ್ದ ಅವರಿಗೆ ಮ್ಯಾನೇಜರ್‌ ಹುದ್ದೆಯೂ ಸಿಕ್ಕಿತ್ತು. ಆದರೆ 2015ರಲ್ಲಿ ಸಂಸ್ಥೆಯು, “ಕೆಲಸ ಸರಿಯಾಗಿ ಮಾಡುತ್ತಿಲ್ಲ’ ಎನ್ನುವ ಕಾರಣ ಕೊಟ್ಟು ತಿರುಮಲೈ ಅವರನ್ನು ಕೆಲಸದಿಂದ ತೆಗೆದುಹಾಕಿತ್ತು.

ಈ ವಿಚಾರವಾಗಿ ತಿರುಮಲೈ ಐಟಿ ಉದ್ಯೋಗಿಗಳ ಫೋರಂನೊಂದಿಗೆ ಸೇರಿಕೊಂಡು ಚೆನ್ನೈನ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬರೋಬ್ಬರಿ 7 ವರ್ಷಗಳ ಕಾಲ ವಿಚಾರಣೆ ನಡೆಸಿರುವ ನ್ಯಾಯಾಲಯ ಈ ತಿಂಗಳು ತೀರ್ಪು ನೀಡಿದೆ.

“ತಿರುಮಲೈ ಮಾಮೂಲಿ ಕೆಲಸಗಾರನಾಗಿರಲಿಲ್ಲ. ಕೌಶಲ್ಯ ಇದ್ದಿದ್ದರಿಂದಾಗಿಯೇ ಮ್ಯಾನೇಜರ್‌ ಹುದ್ದೆವರೆಗೆ ತಲುಪಿದ್ದರು ಹಾಗಾಗಿ ಅವರನ್ನು ವಾಪಸು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಕಳೆದ 7 ವರ್ಷಗಳ ಸಂಬಳವನ್ನೂ ಅವರಿಗೆ ಕೊಡಬೇಕು’ ಎಂದು ಟಿಸಿಎಸ್‌ಗೆ ನ್ಯಾಯಾಲಯ ಆದೇಶಿಸಿದೆ.

ಕಳೆದ 7 ವರ್ಷಗಳಿಂದ ಪಟ್ಟ ಕಟ್ಟ ಅಷ್ಟಿಷ್ಟಲ್ಲ. 150ಕ್ಕೂ ಹೆಚ್ಚು ಬಾರಿ ಕೋರ್ಟ್‌ಗೆ ಸುತ್ತಿದ್ದೇನೆ. ಹೆಂಡತಿಯ ಹಣದಲ್ಲಿ ಜೀವನ ನಡೆಸಿದ್ದೇನೆ. ಈಗ ಗೆದ್ದ ಖುಷಿಯಿದೆ.
– ತಿರುಮಲೈ ಸೆಲ್ವನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next