ನವದೆಹಲಿ:ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಫೆ.02) ಲೋಕಸಭೆಯಲ್ಲಿ 2022-23ನೇ ಸಾಲಿನ ಬಜೆಟ್ ಮಂಡಿಸಿದ್ದು, ತೆರಿಗೆ ಪಾವತಿ ಮತ್ತು ರಿಟರ್ನ್ಸ್ ಸಲ್ಲಿಕೆಗೆ ಹೊಸ ನೀತಿಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ಬಜೆಟ್ 2022: ಮಾನಸಿಕ ಆರೋಗ್ಯ ವರ್ಧನೆಗೆ ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮ ಘೋಷಣೆ
ಸಹಕಾರ ಸಂಘಗಳಿಗೆ ಏಕರೂಪದ ತೆರಿಗೆ ನೀತಿ. ವಿಶೇಷ ಚೇತನ ಮಕ್ಕಳ ಪೋಷಕರಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ. ತೆರಿಗೆ ಪಾವತಿಯಲ್ಲಾದ ತಪ್ಪು ಸರಿಪಡಿಸಲು 2 ವರ್ಷಗಳ ಕಾಲಾವಕಾಶ ನೀಡಿದ ಕೇಂದ್ರ ಸರ್ಕಾರ.
ಕೇಂದ್ರ, ರಾಜ್ಯ ಸರ್ಕಾರ ನೌಕರರಿಗೆ ಏಕರೂಪದ ತೆರಿಗೆ. ಸಹಕಾರ ಸಂಘಗಳ ಮೇಲಿನ ಸರ್ ಚಾರ್ಜ್ ಇಳಿಕೆ. ಶೇ.12ರಿಂದ ಶೇ.7ಕ್ಕೆ ಸರ್ ಚಾರ್ಜ್ ಇಳಿಕೆ ಮಾಡಿದ ಕೇಂದ್ರ ಸರ್ಕಾರ. ಮುಂದಿನ ವರ್ಷದವರೆಗೂ ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ವಿನಾಯ್ತಿ.
*ಡಿಜಿಟಲ್ ಆಸ್ತಿ ಮೇಲೆ ಶೇ.30ರಷ್ಟು ತೆರಿಗೆ
*ಸಹಕಾರ ಸಂಘಗಳಿಗೆ ತೆರಿಗೆ ರಿಲೀಫ್
*ಕ್ರಿಫ್ಟೋ ಕರೆನ್ಸಿ ಮೇಲೆ ತೆರಿಗೆ ಘೋಷಣೆ