Advertisement

ಡ್ರೋಣ್‌ಗಾಗಿಯೇ ಪ್ರತ್ಯೇಕ ನೀತಿ?

06:00 AM Aug 21, 2018 | |

ನವದೆಹಲಿ: ವಾಣಿಜ್ಯಿಕ ಸೇವೆಗಳಿಗೆ ಡ್ರೋಣ್‌ ಬಳಕೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆಗಳು ಇರುವಂತೆಯೇ ಕೇಂದ್ರ ಸರ್ಕಾರ ದೇಶದಲ್ಲಿ ಮುಂದಿನ ತಿಂಗಳು ಹೊಸ ನೀತಿ ಬಿಡುಗಡೆ ಮಾಡಲಿದೆ. ಅದರಲ್ಲಿ ಡ್ರೋಣ್‌ಗಳನ್ನು ಟ್ಯಾಕ್ಸಿಗಳಂತೆ ಬಳಕೆ, ಇ-ಕಾಮರ್ಸ್‌ ವೆಬ್‌ಸೈಟ್‌ಗಳ ಮೂಲಕ ಆರ್ಡರ್‌ ಮಾಡುವ ವಸ್ತುಗಳನ್ನು ಗ್ರಾಹಕರಿಗೆ ಅವುಗಳ ಪೂರೈಕೆ ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ಡ್ರೋಣ್‌ ಬಳಕೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. 

Advertisement

ಈ ಬಗ್ಗೆ “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದ್ದು, ಪ್ರಸ್ತಾವಿತ ನೀತಿಯಲ್ಲಿ ಡ್ರೋಣ್‌ಗಾಗಿಯೇ ಪ್ರತ್ಯೇಕ ಏರ್‌ ಟ್ರಾಫಿಕ್‌ ಕಂಟ್ರೋಲರ್‌, ಪ್ರತ್ಯೇಕ ಪಥ ರಚನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಕಳೆದ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದ್ದ ಕರಡು ನಿಯಮದಲ್ಲಿ ವಿಮಾನ ನಿಲ್ದಾಣಗಳು ಮತ್ತು ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಅವುಗಳ ಹಾರಾಟಕ್ಕೆ ನಿಷೇಧ ಹೇರುವ ವಿಚಾರವಿತ್ತು. ಅಂತಿಮ ನೀತಿಯಲ್ಲಿ ಕೆಲ ನಿಯಮಗಳ ಮೂಲಕ ಅವುಗಳ ವಾಣಿಜ್ಯಿಕ ಬಳಕೆಗೆ ಅನುಮತಿ ನೀಡುವ ಅವಕಾಶ ಕಲ್ಪಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next