ಕೋಲ್ಕತ್ತಾ: ಬಂಗಾಲಿ ನಟಿ, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿಯ ವಿರುದ್ಧ ಕೀಳು ಮಟ್ಟದ ಕಮೆಂಟ್ ಮಾಡಿದ ಟ್ಯಾಕ್ಸಿ ಚಾಲಕನನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಆನಂದ ಪೋರ್ ನಿವಾಸಿ ಲಕ್ಷ್ಮಣ್ ಯಾದವ್ ಎಂದು ಗುರುತಿಸಲಾಗಿದೆ.
ಮಿಮಿ ಚಕ್ರವರ್ತಿ ಗಾರಿಹಾತ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ಟ್ಯಾಕ್ಸಿ ಡ್ರೈವರ್ ಓರ್ವ ಅಸಭ್ಯ ಸಂಭಾಷಣೆಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದ. ಈ ಬಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸೋಮವಾರ ಮಧ್ಯರಾತ್ರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ನಶೆ ನಂಟು: ಸೆಲೆಬ್ರೆಟಿ ದಂಪತಿ ದಿಗಂತ್ – ಐಂದ್ರೀತಾಗೆ ಸಿಸಿಬಿ ನೋಟಿಸ್
ಬೆಂಗಾಲಿ ಚಿತ್ರರಂಗದಲ್ಲಿ ಪ್ರಸಿದ್ದರಾಗಿರುವ ಮಿಮಿ ಚಕ್ರವರ್ತಿ 2019ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ವಿಜಯಿಯಾಗಿದ್ದಾರೆ.