ಚೆನ್ನೈ: ತಮಿಳುನಾಡಿನ ಸಚಿವ ವಿ ಸೆಂಥಿಲ್ ಬಾಲಾಜಿಗೆ ಸಂಬಂಧಿಸಿ ಸುಮಾರು 40 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದೆ.
ಕರೂರ್ ಮತ್ತು ಕೊಯಮತ್ತೂರು ಸೇರಿದಂತೆ ನಗರಗಳಲ್ಲಿ ಸಚಿವರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.
ಸಚಿವರ ಆಪ್ತರು ಮತ್ತು ಕೆಲವು ಗುತ್ತಿಗೆದಾರರ ನಿವೇಶನಗಳನ್ನು ಐಟಿ ಅಧಿಕಾರಿಗಳು ಶೋಧ ನಡೆಸಲಾಗುತ್ತಿದೆ.
ಈ ಮಧ್ಯೆ, ಕರೂರ್ ಜಿಲ್ಲೆಯಲ್ಲಿ ಬಾಲಾಜಿ ಸಹೋದರ ಅಶೋಕ್ ಅವರ ಮನೆಯಲ್ಲಿ ಶೋಧ ನಡೆಸುತ್ತಿರುವ ಐಟಿ ಅಧಿಕಾರಿಗಳು ಮತ್ತು ಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.
Related Articles
ಕರೂರ್‌ನ ಹಿರಿಯ ಡಿಎಂಕೆ ನಾಯಕರಾದ ಬಾಲಾಜಿ ಅವರು ಅಬಕಾರಿ ಖಾತೆಯನ್ನು ಸಹ ಹೊಂದಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ…