Advertisement

ತಟ್ಟು ಚಪಾತಿ ದಿಟ್ಟ ಮಹಿಳೆ

11:57 PM Feb 06, 2020 | Lakshmi GovindaRaj |

ಕಲಬುರಗಿ: ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಲೇ ಇದ್ದಾರೆ. ಅದಕ್ಕೊಂದು ಕೊನೆಯೇ ಇಲ್ಲದಂತೆ ಕಾಣುತ್ತಿದೆ. ಈ ಜನರನ್ನು ಸಂತೃಪ್ತಿಪಡಿಸಲು ಮುಂಜಾನೆ ನಾಲ್ಕರಿಂದ ಸಂಜೆ 4 ರವರೆಗೆ 500 ಮಹಿಳೆಯರು ಬಿಡುವಿಲ್ಲದಂತೆ ಚಪಾತಿ ಲಟ್ಟಿಸುತ್ತಿದ್ದಾರೆ.

Advertisement

ಉದರಗಳು ಶಾಂತವಾದರೂ, ಈ ಮಹಿಳೆಯರಿನ್ನೂ ಶಾಂತವಾಗಿಲ್ಲ. ಅವರ ಕೈಯಲ್ಲಿರುವ ಲಟ್ಟಣಿಗೆಯಿಂದ ಅಗಣಿತ ಸಂಖ್ಯೆಯಲ್ಲಿ ಚಪಾತಿಗಳು ಸೃಷ್ಟಿಯಾಗುತ್ತಲೇ ಇವೆ. ಅವರ ಕೈಗಳಿಗೆ ಸೃಷ್ಟಿಕರ್ತನ ಶಕ್ತಿ ಬಂದಿದೆ. ಪುರುಷರು ಹೊಗೆಯಿಲ್ಲದ ಒಲೆಗಳಲ್ಲಿ ಅನ್ನ ಬಸಿಯುತ್ತಿದ್ದರೆ, ಮಹಿಳೆಯರು ಮಾತ್ರ ಹೊಗೆಸೂಸುವ ಒಲೆಗಳ ಮುಂದೆ ಲಟ್ಟಣಿಗೆ ಹಿಡಿದು ಚಪಾತಿ ತೀಡುತ್ತಿದ್ದರು.

ಆಯೋಜಕರ ಮಾಹಿತಿ ಪ್ರಕಾರ ಎರಡು ದಿನಗಳಲ್ಲಿ ಅಂದಾಜು ಎರಡು ಲಕ್ಷ ಜನ ಊಟ ಮಾಡಿದ್ದಾರೆ. ಅಂದರೆ ಒಬ್ಬರಿಗೆ ಒಂದು ಚಪಾತಿ ಸಿಕ್ಕರೂ, ಎರಡು ಲಕ್ಷ ಚಪಾತಿಗಳನ್ನು ತಯಾರಿಸಲಾಗಿದೆ. ಏನಿಲ್ಲವೆಂದರೂ 200 ಕ್ವಿಂಟಲ್‌ ಗೋದಿ ಹಿಟ್ಟು ಖರ್ಚಾಗಿದೆ. ನಿಮಗೆ ಬೇಸರವಿಲ್ಲವೇ ಎಂದು ಕೇಳಿದರೆ, ನೀರಿಗೆ ಬಿದ್ದ ಮೇಲೆ ಚಳಿ ಎಂದರಾದೀತೆ ಎಂದು ನಗುತ್ತಲೇ ಉತ್ತರಿಸುತ್ತಾರೆ ಮಹಿಳೆಯರು.

* ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next