Advertisement

ಟಿಯಾಗೋ ಇವಿ ರಿಲೀಸ್‌; ಒಂದು ಬಾರಿ ಚಾರ್ಜ್‌ ಮಾಡಿದರೆ 312 ಕಿಮೀ ಸಂಚಾರ

06:21 PM Sep 28, 2022 | Team Udayavani |

ಟಾಟಾ ಮೋಟರ್ಸ್‌ನ ಜನಪ್ರಿಯ ವಾಹನ ಟಾಟಾ ಟಿಯಾಗೋದ ವಿದ್ಯುತ್‌ಚಾಲಿತ ಆವೃತ್ತಿಯ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ.

Advertisement

ಅದರಲ್ಲಿ ಎರಡು ಬ್ಯಾಟರಿಗಳ ಆಯ್ಕೆಯ ಅವಕಾಶ ಇದೆ. 12.2 ಕಿಲೋವಾಟ್‌ ಬ್ಯಾಟರಿಯ ಕಾರ್‌ಗೆ 8.49 ಲಕ್ಷ ರೂ., 24 ಕಿಲೋವ್ಯಾಟ್‌ ಬ್ಯಾಟರಿ ಸಾಮರ್ಥ್ಯದ ಕಾರ್‌ಗೆ 9.09 ಲಕ್ಷ ರೂ. ಬೆಲೆ ನಿಗದಿ ಮಾಡಲಾಗಿದೆ.

ಹೊಸ ಮಾದರಿಯ ಕಾರು 5.7 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 60 ಕಿಮೀ ವೇಗ ಪಡೆದುಕೊಳ್ಳುತ್ತದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 312 ಕಿಮೀ ವರೆಗೆ ಸಂಚರಿಸಲು ಸಾಧ್ಯವಾಗುತ್ತದೆ.

ಸಿಟಿ ಮತ್ತು ಸ್ಪೋರ್ಟ್ಸ್ ಎಂಬ ಎರಡು ಡ್ರೈವಿಂಗ್‌ ಆಯ್ಕೆ ಲಭ್ಯವಿದೆ. ಅದರಲ್ಲಿ ಎಂಟು ಸ್ಪೀಕರ್‌ಗಳು ಇರುವ ಹರ್ಮನ್‌ ಇನ್ಫೊಟೈನ್‌ಮೆಂಟ್‌ ವ್ಯವಸ್ಥೆ ಇರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next