Advertisement

ಟಾಟಾ ಓಪನ್‌: ಗಾಯ, ಹೊರನಡೆದ ಮರಿನ್‌ ಸಿಲಿಕ್‌

11:24 PM Jan 05, 2023 | Team Udayavani |

ಪುಣೆ: ಅಗ್ರ ಶ್ರೇಯಾಂಕದ ಮರಿನ್‌ ಸಿಲಿಕ್‌ ಅವರು, ಟಾಟಾ ಓಪನ್‌ ಮಹಾರಾಷ್ಟ್ರ ಟೆನಿಸ್‌ ಕೂಟದಿಂದ ಹೊರ ನಡೆದಿದ್ದಾರೆ.

Advertisement

ತಾನಾಡಬೇಕಿದ್ದ ಕ್ವಾರ್ಟರ್‌ಫೈನಲ್‌ ಪಂದ್ಯಕ್ಕಿಂತ ಮೊದಲು, ಮೊಣಕಾಲಿನ ಗಾಯದಿಂದಾಗಿ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

2014ರ ಯುಎಸ್‌ ಓಪನ್‌ ಚಾಂಪಿಯನ್‌ ಆಗಿದ್ದ ಸಿಲಿಕ್‌ ಕ್ವಾರ್ಟರ್‌ಫೈನಲ್‌ನಲ್ಲಿ ನೆದರ್ಲೆಂಡ್ಸ್‌ನ ತಾಲೂನ್‌ ಗ್ರೀಕ್‌ಸ್ಪೂರ್‌ ಅವರನ್ನು ಎದುರಿಸಬೇಕಿತ್ತು. ಆದರೆ ಬೆಳಗ್ಗೆ ಅಭ್ಯಾಸ ನಡೆಸುತ್ತಿದ್ದ ವೇಳೆ ಮೊಣಕಾಲಿನ ಗಾಯಕ್ಕೆ ಒಳಗಾದ ಅವರು ಪಂದ್ಯ ತ್ಯಜಿಸಲು ನಿರ್ಧರಿಸಿದರು. ವಾಕ್‌ಓವರ್‌ ಪಡೆದ ಗ್ರೀಕ್‌ಸ್ಪೂರ್‌ ಸೆಮಿಫೈನಲ್‌ ಹಂತಕ್ಕೇರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next