ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ನೆಕ್ಸಾನ್ ಇವಿ ಮ್ಯಾಕ್ಸ್ ಕಾರಿನ ಹೊಸ ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಕ್ಲೈಮೇಟ್ ಕಂಟ್ರೋಲ್, ಡಿಆರ್‌ಎಲ್ ಹೊಂದಿರುವ ಪ್ರಾಜೆಕ್ಟರ್
ಹೆಡ್‌ಲ್ಯಾಂಪ್‌ಗಳು, ಎಲ್ಲ ಚಕ್ರಗಳಿಗೂ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಫೀಚರ್‌ಗಳನ್ನು ಸೇರಿಸಲಾಗಿದೆ.
ವಿಶೇಷವೆಂದರೆ, ನೆಕ್ಸಾನ್ ಇವಿ ಮ್ಯಾಕ್ಸ್ ದರವನ್ನೂ ಕಂಪನಿ ಇಳಿಕೆ ಮಾಡಿದ್ದು, ಹಿಂದಿಗಿಂತ 1.85 ಲಕ್ಷ ರೂ.ನಷ್ಟು ಕಡಿಮೆ ಬೆಲೆಗೆ ಕಾರು ಲಭ್ಯವಿದೆ.
Related Articles
ಕಾರಿನ ಎಕ್ಸ್‌ಶೋರೂಂ ದರ ಈಗ 14.49 ಲಕ್ಷ ರೂ. ಆಗಿದೆ. ಇದರ ರೇಂಜ್ ಅನ್ನು 453 ಕಿ.ಮೀ.ಗೆ ಏರಿಸಲಾಗಿದೆ.
ನೆಕ್ಸಾನ್ ಇವಿ ಮ್ಯಾಕ್ಸ್ ಎಕ್ಸ್‌ಎಂ ಡೆಲಿವರಿ ಏಪ್ರಿಲ್‌ನಿಂದ ಆರಂಭವಾಗಲಿದೆ.