ನವದೆಹಲಿ: ಸದ್ಯದಲ್ಲೇ ಏರ್‌ಇಂಡಿಯಾವು ದೇಶದಲ್ಲಿ ಎರಡನೇ ಅತಿದೊಡ್ಡ ವೈಮಾನಿಕ ಸಂಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಲಿದೆಯೇ?
ಹೌದು, ಟಾಟಾ ಗ್ರೂಪ್‌ನ ಮಾತೃಸಂಸ್ಥೆ ಟಾಟಾ ಸನ್ಸ್ ತನ್ನ ಎಲ್ಲ ವಿಮಾನಯಾನ ಕಂಪನಿಗಳನ್ನೂ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.
ಅದರಂತೆ, ವಿಸ್ತಾರ, ಏರ್‌ಏಷ್ಯಾ ಇಂಡಿಯಾ ಮತ್ತು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ಏರ್‌ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ. ವಾರದೊಳಗೆ ಈ ಕುರಿತ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ವಿಸ್ತಾರ ಕಂಪನಿಯ ಜಂಟಿ ಪಾಲುದಾರ ಸಂಸ್ಥೆಯಾದ ಸಿಂಗಾಪುರ ಏರ್‌ಲೈನ್ಸ್‌ನೊಂದಿಗೆ ಸರಣಿ ಸಮಾಲೋಚನೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಹೇಳಲಾಗಿದೆ.
Related Articles
ಟಾಟಾ ಸಂಸ್ಥೆಯು ಏರ್‌ಇಂಡಿಯಾವನ್ನು ಖರೀದಿಸಿದ ಬಳಿಕ ಅದರ ಪುನಶ್ಚೇತನಕ್ಕಾಗಿ ಟಾಟಾ ಗ್ರೂಪ್‌ನ ವಿವಿಧ ಸಂಸ್ಥೆಗಳು ಶ್ರಮ ಹಾಕುತ್ತಲೇ ಇವೆ.
ವಿಲೀನವಾದರೆ ಏನಾಗುತ್ತದೆ?
ಈ ವಿಲೀನ ಪ್ರಕ್ರಿಯೆಯ ಬಳಿಕ ಟಾಟಾ ಸನ್ಸ್ ಪೂರ್ಣ ಪ್ರಮಾಣದ ಸೇವೆ ಮತ್ತು ಅಗ್ಗದ ದರದ ವಿಮಾನಯಾನ ಕಂಪನಿ ಎಂಬ ಹೆಗ್ಗಳಿಕೆ ಗಳಿಸಲಿದೆ. ಅಲ್ಲದೆ, ಏರ್‌ಇಂಡಿಯಾವು ಟಾಟಾ ಸಮೂಹದಡಿ ಇರುವ ಏಕೈಕ ಏರ್‌ಲೈನ್ ಬ್ರ್ಯಾಂಡ್ ಆಗಲಿದೆ.
ಇದು ಸಾಧ್ಯವಾದರೆ ಏರ್‌ಇಂಡಿಯಾವು ಒಟ್ಟಾರೆ ವಿಮಾನಗಳ ಸಂಖ್ಯೆ ಹಾಗೂ ಮಾರುಕಟ್ಟೆ ಪಾಲಿನಲ್ಲಿ ದೇಶದ 2ನೇ ಅತಿದೊಡ್ಡ ಏರ್‌ಲೈನ್ಸ್ ಎಂಬ ಖ್ಯಾತಿ ಪಡೆಯಲಿದೆ. ವಿಲೀನದ ಬಳಿಕ ಏರಿಂಡಿಯಾದಲ್ಲಿನ ಒಟ್ಟು ವಿಮಾನಗಳ ಸಂಖ್ಯೆ ಸುಮಾರು 233ಕ್ಕೇರಲಿದೆ.