Advertisement

ನಾಳೆಯಿಂದ ಟಾಟಾ ಕಂಪೆನಿಯ ಕಾರು ದುಬಾರಿ

11:49 PM Nov 05, 2022 | Team Udayavani |

ಹೊಸದಿಲ್ಲಿ: ಟಾಟಾ ಕಂಪೆನಿಯ ಕಾರುಗಳ ಬೆಲೆ ನ.7ರಿಂದ ಏರಿಕೆಯಾಗಲಿದೆ. ಈ ಕುರಿತು ಮಾಹಿತಿ ನೀಡಿರುವ ಟಾಟಾ ಮೋಟರ್ಸ್‌, ಸೋಮವಾರದಿಂದ ದೇಶಾದ್ಯಂತ ಟಾಟಾ ಕಂಪೆನಿಯ ಪ್ರಯಾಣಿಕ ಕಾರುಗಳಾದ ಟಿಯಾಗೊ, ಪಂಚ್‌, ನೆಕ್ಸಾನ್‌ ಮತ್ತು ಸಫಾರಿ ಕಾರುಗಳ ಬೆಲೆ ಕೊಂಚ ಮಟ್ಟಿಗೆ ಏರಿಕೆಯಾಗಲಿದೆ.

Advertisement

ಒಟ್ಟಾರೆ ತಯಾರಿಕ ವೆಚ್ಚ ಏರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. “ಕಾರುಗಳ ವೇರಿಯಂಟ್‌ ಮತ್ತು ಮಾಡೆಲ್‌ ಆಧರಿಸಿ ಬೆಲೆಗಳ ಏರಿಕೆಯಲ್ಲಿ ವ್ಯತ್ಯಾಸವಾಗಲಿದೆ.

ಸರಾಸರಿ ಶೇ.0.09ರಷ್ಟು ಬೆಲೆ ಹೆಚ್ಚಳವಾಗಲಿದೆ,’ ಎಂದು ಟಾಟಾ ಕಂಪೆನಿ ಹೇಳಿದೆ. ಈ ವರ್ಷದ ಜನವರಿ, ಎಪ್ರಿಲ್‌ ಮತ್ತು ಜುಲೈಯಲ್ಲೂ ಟಾಟಾ ಮೋಟರ್ಸ್‌ ತನ್ನ ಕಾರುಗಳ ಬೆಲೆ ಹೆಚ್ಚಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next