Advertisement

ಕಾರು ಅಪಘಾತ: ಟಾರ್ಜನ್ ಚಿತ್ರದ ನಟ ಹೇಮಂತ್, ಪತ್ನಿ, ಪುತ್ರಿ ಪ್ರಾಣಾಪಾಯದಿಂದ ಪಾರು

03:38 PM Jan 12, 2022 | Team Udayavani |

ಮುಂಬಯಿ: ಅಡ್ವೆಂಚರ್ಸ್ ಆಫ್ ಟಾರ್ಜನ್ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟ ಹೇಮಂತ್ ಬಿರ್ಜೆ ಅವರು ಮುಂಬಯಿ-ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ತಡರಾತ್ರಿ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಪುಣೆ ಸಮೀಪದ ಟೋಲ್ ಗೇಟ್ ಬಳಿ ಬಿರ್ಜೆ ಅವರ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಹೊಡೆದ ಪರಿಣಾಮ ಬಿರ್ಜೆ, ಪತ್ನಿ ಹಾಗೂ ಮಗಳು ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿ ವಿವರಿಸಿದೆ.

1985ರಲ್ಲಿ ಬಬ್ಬರ್ ಸುಭಾಷ್ ಅವರ “ಅಡ್ವೆಂಚರ್ಸ್ ಆಫ್ ಟಾರ್ಜನ್ ಸಿನಿಮಾದ ಮೂಲಕ ಹೇಮಂತ್ ಬಾಲಿವುಡ್ ಪ್ರವೇಶಿಸಿದ್ದರು. ಈ ಸಿನಿಮಾದಲ್ಲಿ ಕಿಮಿ ಕಾಟ್ಕರ್ ಸಹ ನಟಿಸಿದ್ದರು.

ಹೇಮಂತ್ ಮಿಥುನ್ ಚಕ್ರವರ್ತಿ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದರು. 2005ರಲ್ಲಿ ನಟ ಹೇಮಂತ್ ಗರ್ವ್, ಪ್ರೈಡ್ ಮತ್ತು ಹಾನರ್ ಸಿನಿಮಾದಲ್ಲಿ ನಟಿಸಿದ್ದರು, ಇದರಲ್ಲಿ ಸಲ್ಮಾನ್ ಖಾನ್ ಹೀರೋ ಆಗಿದ್ದರು.

ಹೇಮಂತ್ ಬಿರ್ಜೆ ಅವರು ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದರು. ಹಿಂದಿಯ ಕಮಾಂಡೋ, ಖಬರ್ ಸ್ತಾನ್, ಸಿಂದೂರ್ ಔರ್ ಬಂದೂಕ್, ಸೌ ಸಾಲ್ ಬಾದ್, ಆಗ್ ಕೇ ಶೋಲೆ, ಲಷ್ಕರ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಹೇಮಂತ್ ನಟಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next