Advertisement

ರಕ್ಷಣೆಗೆಂದು ತೆರಳಿ…: ಭದ್ರಾ ಕಾಲುವೆಯಲ್ಲಿ ಮುಳುಗಿ ಮೂವರ ಸಾವು

12:00 PM May 22, 2023 | Team Udayavani |

ಚಿಕ್ಕಮಗಳೂರು: ಒಬ್ಬರ ರಕ್ಷಣೆಗೆ ಮತ್ತೊಬ್ಬರು ಹೀಗಿ ಭದ್ರಾ ಕಾಲುವೆಯಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ನ ಬಲದಂಡೆಯ ಕಾಲುವೆಯಲ್ಲಿ ನಡೆದಿದೆ.

Advertisement

ರವಿ (31 ವ), ಅನನ್ಯ (17 ವ), ಶಾಮವೇಣಿ (16 ವ) ಮೃತ ದುರ್ದೈವಿಗಳು. ರವಿ ಮೂಲತಃ ಲಕ್ಕವಳ್ಳಿ ನಿವಾಸಿಯಾಗಿದ್ದು, ಅನನ್ಯ, ಶಾಮವೇಣಿ ರವಿಯ ಸಹೋದರಿಯರ ಮಕ್ಕಳಾಗಿದ್ದಾರೆ. ಅನನ್ಯ ಮೂಲತಃ ಶಿವಮೊಗ್ಗದವರಾಗಿದ್ದು, ಶಾಮವೇಣಿ ನಂಜನಗೂಡಿನವರು. ಸಂಬಂಧಿ ರವಿ ಮನೆಗೆಂದು ಲಕ್ಕವಳ್ಳಿಗೆ ಬಂದಿದ್ದರು.

ಇದನ್ನೂ ಓದಿ:Lucknow: ಹಲವೆಡೆ 2,000 ರೂ. ನೋಟು ಸ್ವೀಕರಿಸಲು ನಕಾರ, ಚಿನ್ನ ಖರೀದಿಸಲು ಆಸಕ್ತಿ!

ನೀರಿನಲ್ಲಿ ಆಟವಾಡುವಾಗ ಆಯಾ ತಪ್ಪಿ ಬಿದ್ದಿದ್ದು, ಒಬ್ಬರ ರಕ್ಷಣೆಗೆ ಮತ್ತೊಬ್ಬರು ಹೋಗಿ ಮೂವರು ಸಾವನ್ನಪ್ಪಿದ್ದಾರೆ. ರವಿ ಮೃತದೇಹ ಪತ್ತೆಯಾಗಗಿದ್ದು, ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.

ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next