Advertisement
ಪಟ್ಟಣದ ಡಾ| ಅಂಬೇಡ್ಕರ್ ಭವನದಲ್ಲಿ ಮಮತಾ ಮಹಿಳಾ ಸಮಾಜ ಮತ್ತು ಕಲಾ ಫಾರಂ ವತಿಯಿಂದ ಹಮ್ಮಿಕೊಂಡಿದ್ದ ಮೌಲ್ಯವರ್ಧಿತ ಹಲಸಿನ ಮೇಳ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಹಲಸಿನ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸಿ ಉಪಯೋಗಿಸಬಹುದು. ಬೀಜದಿಂದಲೂ ಉಪಯೋಗವಿದೆ. ಆಹಾರವಾಗಿಯೂ ಬಳಸಬಹುದು. ಹಲಸು ಬೆಳಸುವುದರಿಂದ ರೈತರಿಗೆ ಹಲವಾರು ಉಪಯೋಗಗಳಿವೆ. ಮರದಿಂದ ಬೀಳುವ ಎಲೆಗಳಿಂದ ಗೊಬ್ಬರವಾಗುತ್ತದೆ. ಬೆಳೆದು ನಿಂತ ಮರ ತೇವಾಂಶವನ್ನು ಭೂಮಿಗೆ ನೀಡುತ್ತದೆ ಹಾಗೂ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಸಿವಿನಿಂದ ಬಳಲುವವರಿಗೆ ಹಲಸು ಆಹಾರವಾಗುತ್ತದೆ ಎಂದರು.
ಹಲಸನ್ನು ನವ ಕಲ್ಪವೃಕ್ಷ ಎಂದು ಕರೆಯಲಾಗುತ್ತಿದೆ. ಹಲಸಿನ ಬೆಳೆಯನ್ನು ಮಾರುಕಟ್ಟೆ ಮಾಡುವುದನ್ನು ರೈತರು ಕಲಿತುಕೊಳ್ಳಬೇಕು. ಹಣ್ಣುಗಳ ಮೌಲ್ಯವರ್ಧನೆ ಮಾಡಿಕೊಳ್ಳಬೇಕು. ಅವುಗಳನ್ನು ಪ್ಯಾಕ್ ಮಾಡಿ ಮಾರುಕಟ್ಟೆಗೆ ತಲುಪಿಸುವ ಕೆಲಸ ಮಾಡಿದರೆ ಲಾಭ ಗಳಿಸಬಹುದಾಗಿದೆ. ಒಂದು ಮರದಿಂದ ಲಕ್ಷ ರೂ.ಆದಾಯ ಪಡೆಯಬಹುದು ಎಂದರು. ತೋಟಗಾರಿಕಾ ಇಲಾಖೆಯ ಲಿಂಗರಾಜು, ಪ್ರಗತಿಪರ ಕೃಷಿಕ ವೀರಣ್ಣ, ಜನಾರ್ದನ್, ಶೋಭಾ ಮಹೇಂದ್ರ, ಮಮತಾ ಮಹಿಳಾ ಸಮಾಜದ ಅದ್ಯಕ್ಷೆ ಸೌಭಾಗ್ಯ ಶ್ರೀರಂಗಪ್ಪ ಮಾತನಾಡಿದರು.
ಹಲಸಿನ ಖಾದ್ಯ ಮೇಳ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹಲಸಿನ ಹಣ್ಣಿನಿಂದ ವಿವಿಧ ಬಗೆಯ ಖಾದ್ಯಗಳನ್ನು ಸ್ಥಳದಲ್ಲಿಯೇ ತಯಾರಿಸಿ ಮಾರಾಟ ಮಾಡಲಾಯಿತು. ಹಲಸಿನ ಮಿಲ್ಕಶೇಕ್, ಬೋಂಡಾ, ಕಬಾಬ್, ಹಲಸಿನ ಹೋಳಿಗೆ, ಬನ್, ದೋಸೆ, ಬಿಳಿ ಹೋಳಿಗೆ ಆಹಾರ ಪ್ರಿಯರ ಮೆಚ್ಚುಗೆಗೆ ಪಾತ್ರವಾದವು.