ಉಡುಪಿ: ಮೂರು ದಿನಗಳ ವಾರ್ಷಿಕ ಹಣಕಾಸಿನ ಸಮಾವೇಶ “ಫಿನೊಮಿನಲ್’ 3ನೇ ಆವೃತ್ತಿ ಮಣಿಪಾಲ ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯಿತು. “ಆಡಳಿತ ನಡೆಸಿ, ಬಲಪಡಿಸಿ, ರೂಪಾಂತರಿಸಿ’ ಎಂಬ ಥೀಮ್ ಹೊಂದಿರುವ ಈ ಫಿನಾಮಿನಲ್ ಅರ್ಥಶಾಸ್ತ್ರಜ್ಞರು, ಸಿಎಕ್ಸ್‌ಒಗಳು, ಬ್ಯಾಂಕರ್‌ಗಳು, ನಿಯಂತ್ರಕರು ಮತ್ತು ನಿಧಿ ವ್ಯವಸ್ಥಾಪಕ ರನ್ನು ಒಂದೇ ವೇದಿಕೆಗೆ ತರುವ ಮೂಲಕ ಇತ್ತೀಚಿನ ಪ್ರವೃತ್ತಿಗಳು, ಸಮಸ್ಯೆಗಳು, ಸವಾಲುಗಳು ಮತ್ತು ಉದ್ಯಮದಲ್ಲಿನ ಅವಕಾಶಗಳ ಬಗ್ಗೆ ಪರಸ್ಪರ ಚರ್ಚಿಸಲು ಅವಕಾಶ ಕಲ್ಪಿಸಿತು.
ಬಾರ್ಕ್‌ಲೆಸ್ ಬ್ಯಾಂಕ್ ಪಿಎಲ್ಸಿ- ರಿಸ್ಕ್ ಸೊಲ್ಯೂಶನ್ಸ್ ಗ್ರೂಪ್ ನಿರ್ದೇಶಕ ಹರೀಶ್ ಮದ್ನಾನಿ, ಪಾಲಿಸಿ ಬಜಾರ್‌ನ ಮ್ಯೂಚುವಲ್ ಫಂಡ್-ಬಿಸಿನೆಸ್ ಹೆಡ್ ಮನೀಶ್ ಕೊಟಾರಿ, ನ್ಯಾಶನಲ್ ಆಸ್ಟ್ರೇಲಿಯಾ ಬ್ಯಾಂಕ್ ಕಂಪ್ಲಯೆನ್ಸ್- ಇಂಡಿಯಾ ಹೆಡ್ ಮಿತುಲ್ ದೇಸಾಯಿ, ಬ್ಲೂಮ್‌ಬರ್ಗ್ ಎಲ್‌ಪಿ- ಇಕ್ವಿಟಿ ಸೇಲ್ಸ್‌ನ ಸೇಲ್ಸ್ ಅಸೋಸಿಯೇಟ್ ನಿತಿನ್ ಪರಮೇಶ್ವರ್, ಕೋಟಾಕ್ ಮಹೀಂದ್ರಾ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿಯ ಫಿಕ್ಸ್ ಇನ್‌ಕಮ್ ಮತ್ತು ಹೆಡ್-ಪ್ರಾಡಕ್ಟ್ ಸಿಐಒ ಲಕ್ಷ್ಮೀ ಅಯ್ಯರ್ ಸೇರಿದಂತೆ ಅನೇಕ ಶ್ರೇಷ್ಠ ಉದ್ಯಮ ತಜ್ಞರು ಭಾಗವಹಿಸಿದ್ದರು.
ಸಾಂಸ್ಥಿಕ ಗವರ್ನೆನ್ಸ್‌ನಲ್ಲಿ ಬದಲಾಗುತ್ತಿರುವ ಪ್ರವೃತ್ತಿಗಳ ಕುರಿತು ಟ್ಯಾಪ್ಮಿ ಪ್ರಾಧ್ಯಾಪಕ ರಾಜೀವ್ ಶಾ ಮಾತನಾಡಿದರು. ಸೈಮನ್ ಜಾರ್ಜ್, ರತನ್ ಜಾರ್ಜ್ ಮಾತನಾಡಿದರು. ಈ ಫಿನಾಮಿನಲ್‌ನ “ಆಡಳಿತ ನಡೆಸಿ, ಬಲಪಡಿಸಿ, ರೂಪಾಂತರಿಸಿ’ ಎಂಬ ಥೀಮ್ ಮೇಲೆ ಬೆಳಕು ಚೆಲ್ಲಿ ಮಾತನಾಡಿದ ಮುಖ್ಯ ಅತಿಥಿ, ಹಣಕಾಸು ತಜ್ಞ ಗಂಟಿ ಮೂರ್ತಿ, “ಉತ್ತಮ ಆಡಳಿತವು ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಪರಿವರ್ತಿಸುತ್ತದೆ. ನಾವು ವ್ಯವಸ್ಥೆ ಯಲ್ಲಿನ ಆ ಕಟ್ಟುಪಾಡುಗಳನ್ನು ಕೇವಲ ಒಳಗೊಳ್ಳುವುದಷ್ಟೇ ಅಲ್ಲ, ಅದರ ಜತೆಗೆ ಗುಣಾತ್ಮಕವಾಗಿ ಇರುವುದು ಒಳ್ಳೆಯ ಆಡಳಿತವಾಗುತ್ತದೆ. ಹೀಗಾಗಿ ಹಣಕಾಸು ಉತ್ಸಾಹಿಗಳಾಗಿ, ನಾವು ಆಡಳಿತದ ಮಾನದಂಡಗಳನ್ನು ಸುಧಾರಿಸುವ ಮೂಲಕ ಮುಂದೆ ಸಾಗಬೇಕಾಗುತ್ತದೆ’ ಎಂದು ತಿಳಿಸಿದರು.
ಸಮಾವೇಶದಲ್ಲಿ ಮೂರು ವಿಭಾಗಗಳಲ್ಲಿ ನಡೆದ ಅಂತರ ಕಾಲೇಜು ಸ್ಪರ್ಧೆಗಳ ವಿವರ ಇಂತಿದೆ:
ಟ್ಯಾಪ್ಮಿ- ಬ್ಲೂಮ್‌ಬರ್ಗ್ ಓಲಂಪಿ ಯಾಡ್: ಇದರಲ್ಲಿ ಸುಮಾರು 10ಕ್ಕಿಂತ ಹೆಚ್ಚಿನ ಬಿ-ಸ್ಕೂಲ್‌ಗಳ ಬ್ಲೂಮ್‌ಬರ್ಗ್ ಚ್ಯಾಂಪಿಯನ್ಸ್ ಭಾಗವಹಿಸಿದ್ದರು. ಈ ವರ್ಷ ಬ್ಲೂಮ್‌ಬರ್ಗ್ ಒಲಿಂಪಿಯಾಡ್ ವಿಜೇತರು ಟ್ಯಾಪ್ಮಿ.
ಅಕ್ರಿಷನ್ 1.0.: ಈ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಲೀನ ಅಥವಾ ಅಕ್ವಿಸಿಶನ್ ಪ್ರದೇಶದಲ್ಲಿ ಹಣಕಾಸು ಸಲಹೆಗಾರರ ಪಾತ್ರವನ್ನು ವಹಿಸಿದ್ದರು. ಐಐಎಂ- ಕೋಲ್ಕತಾ ಈ ವರ್ಷ ಗೆದ್ದಿತು.
ಆಡಳಿತ ನಡೆಸಿ, ಅದು ಹಕ್ಕು: ಈ ಸ್ಪರ್ಧೆಯಲ್ಲಿ ಆಡಳಿತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೋರ್ಡ್ / ಅಲ್ಪ ಸಂಖ್ಯಾಕರ ಪಾಲುದಾರರ ಪ್ರತಿನಿಧಿಯ ಪಾತ್ರವನ್ನು ವಿದ್ಯಾರ್ಥಿಗಳು ವಹಿಸಿದ್ದರು. ಟ್ಯಾಪ್ಮಿಯ ಅಂಬರೀಷ್ ಮತ್ತು ನಂದನ್ ಅವರು ಪ್ರಶಸ್ತಿ ಗೆದ್ದರು.