Advertisement

ಮಾಜಿ ಶಾಸಕ, ಶಾಸಕ ಪುತ್ರರಿಗೆ ಟಿಎಪಿಸಿಎಂಎಸ್‌ ಅಧಿಕಾರ

03:58 PM Feb 18, 2021 | Team Udayavani |

ಯಳಂದೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್‌) ಅಧ್ಯಕ್ಷ ಹಾಗೂ ಉಪಾಧ್ಯಕ ಸ್ಥಾನಕ್ಕೆ ಗುರುವಾರ ಚುನಾವಣೆಯ ನಿಗದಿಯಾಗಿದ್ದು, ಅಧ್ಯಕ್ಷರಾಗಿ ಮಾಜಿ ಶಾಸಕ ಎಸ್‌.ಬಾಲರಾಜು ಹಾಗೂ ಉಪಾಧ್ಯಕ್ಷರಾಗಿ ಶಾಸಕರ ಪುತ್ರ ಕುಸುಮರಾಜು ಆಯ್ಕೆಯಾಗುವ ಸಾಧ್ಯತೆ ಇದೆ.

Advertisement

ಟಿಎಪಿಸಿಎಂಎಸ್‌ನಲ್ಲಿ ಒಟ್ಟು 12 ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು 9 ಮಂದಿ, ಬಿಜೆಪಿ ಬೆಂಬಲಿತರು 2 ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು ಹೆಚ್ಚಿನ ಸ್ಥಾನವನ್ನು ಪಡೆದಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಬಹುದು. ಚುನಾವಣೆ ನಡೆದರೂ ಅವರಿಬ್ಬರೂ ಗೆಲುವು ಸಾಧಿಸಲಿದ್ದಾರೆ.

ಸಂಘದಲ್ಲಿ ಒಟ್ಟು 2021 ಸದಸ್ಯರು ನೋಂದಣಿಯಾಗಿದ್ದಾರೆ. ಆದರೆ ಇದರಲ್ಲಿ ನವೀಕರಣಗೊಂಡಿರುವ ಕೇವಲ 1299 ಸದಸ್ಯರು. ಈ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಎಸ್‌. ಬಾಲರಾಜು 880 ಮತ ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿಗಳಾದ ಎ.ಬಿ.ಜಯಶಂಕರ್‌ ಹಾಗೂ ಸಿ.ಮಹದೇವಸ್ವಾಮಿ ವಿರುದ್ಧ ದಾಖಲೆಯ ಗೆಲುವು ಸಾಧಿಸಿದರು. ಈ ಹಿಂದೆ 1995ರಲ್ಲಿ ನಡೆದ ಚುನಾವನೆಯಲ್ಲಿ ನಿರ್ದೇಶಕರಾಗಿದ್ದರೂ ಜೊತೆಗೆ ಕೊಳ್ಳೇಗಾಲ ಕ್ಷೇತ್ರದಿಂದ 2004ರಲ್ಲಿ ಶಾಸಕರಾಗಿ ಅನುಭವ ಪಡೆದಿರುವ ಬಾಲರಾಜ್‌ ಅವರಿಗೆ ಅಧ್ಯಕ್ಷ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರ ಪುತ್ರ ಪಿ. ಕುಸುಮರಾಜು 794 ಮತ ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ನಿಂಗರಾಜು ವಿರುದ್ಧ ಗೆಲವು ಸಾಧಿಸಿದ್ದರು. ಕುಸುಮರಾಜು ಉಪಾಧ್ಯಕರಾಗುವವ ಸಾಧ್ಯತೆಯಿದ್ದು, ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ ಚುನಾವಣೆ ಹಾಗೂ ರಾಜಕೀಯ ಬೆಳವಣಿಗೆಗೆ ಈ ಸ್ಥಾನ ನೆರವಾಗಲಿದೆ.

ಮಾಜಿ ಶಾಸಕ ಬಾಲರಾಜು ಪ್ರತಿಕ್ರಿಯೆ: ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಪಡೆದಿದ್ದು, ರೈತರಿಗೆ ಸಾಲ ಸೌಲಭ್ಯ, ರಸಗೊಬ್ಬರ ಪೂರೈಕೆ ಸೇರಿದಂತೆ ರೈತರ ಉಪಯೋಗವಾಗುವ ಯೋಜನೆಗಳನ್ನು ರೂಪಿಸಿ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು. ಎಲ್ಲ ನಿರ್ದೇಶಕರ ಸಹಕಾರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಅಭಿವೃದ್ಧಿ ಮಾಡಲಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next