Advertisement

ಜಲಜೀವನ ಮಿಷನ್‌ ಯೋಜನೆಯಡಿ ಮನೆಗಳಿಗೆ ನಲ್ಲಿ ನೀರು ಪೂರೈಕೆ: ಡಾ|ಅಜಯಸಿಂಗ್‌

03:08 PM Sep 03, 2022 | Team Udayavani |

ಜೇವರ್ಗಿ: ಜಲಜೀವನ ಮಿಷನ್‌ ಯೋಜನೆಯಡಿ ಜೇವರ್ಗಿ ಮತ್ತು ಯಡ್ರಾಮಿ ತಾಲೂಕು ಸೇರಿದಂತೆ ಒಟ್ಟು 64 ಹಳ್ಳಿಗಳಿಗೆ ಮನೆ-ಮನೆಗೆ ನಲ್ಲಿ ನೀರು ಪೂರೈಸಲಾಗುತ್ತಿದೆ ಎಂದು ಶಾಸಕ ಡಾ|ಅಜಯಸಿಂಗ್‌ ಹೇಳಿದರು.

Advertisement

ತಾಲೂಕಿನ ಹಂದನೂರ ಗ್ರಾಮದಲ್ಲಿ ಜಲಜೀವನ ಮಿಷನ್‌ ಯೋಜನೆ ಅಡಿ ಮನೆ-ಮನೆಗೆ ನಲ್ಲಿ ನೀರು ಪೂರೈಕೆ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ತರವಾಗಿದ್ದು, ಗುಣಮಟ್ಟ ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹಂದನೂರ ಗ್ರಾಮದಲ್ಲಿ ಈ ಯೋಜನೆಯಡಿ 402 ಮನೆಗಳಿಗೆ ಕುಡಿಯುವ ನೀರು ಕಲ್ಪಿಸಲು 1.43ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಈ ಯೋಜನೆಯಡಿ 64 ಹಳ್ಳಿಗಳನ್ನು ತೆಗೆದುಕೊಳ್ಳಲಾಗಿದೆ. ಹಲವಾರು ಕಡೆ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದೆಡೆ ಪ್ರಗತಿ ಹಂತದಲ್ಲಿವೆ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಬಸಣ್ಣಗೌಡ ಮಾಲಿಪಾಟೀಲ, ಗ್ರಾ.ಪಂ ಅಧ್ಯಕ್ಷೆ ಗೌರಮ್ಮ ಶಾಂತಪ್ಪ, ಉಪಾಧ್ಯಕ್ಷ ತಿಪ್ಪಣ್ಣ ಕರಕಿಹಳ್ಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಮಾಳಿಂಗರಾಯ, ಕಿರಿಯ ಅಭಿಯಂತರ ಅಜಮೀರ ಅಲಿ, ಮಲ್ಲಪ್ಪ, ಹಣಮಂತ, ಮಲ್ಲಪ್ಪ ಕರಕಿಹಳ್ಳಿ, ಬಾಷಾ ಪಟೇಲ್‌ ಬಣಮಗಿ, ರುಕುಂ ಪಟೇಲ ಪೊಲೀಸ್‌ ಪಾಟೀಲ, ಅಹ್ಮದ್‌ ಅಲಿ ಹಳ್ಳಿ, ಲಾಲಸಾಬ್‌ ಜೇರಟಗಿ, ಚಂದರಶೇಖರ ನೇರಡಗಿ, ರಾಜಶೇಖರ ಮುತ್ತಕೋಡ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next