Advertisement
40 ಕೋಟಿ ರೂ.ವೆಚ್ಚದಲ್ಲಿ ಕುದ್ರು ಅಭಿವೃದ್ಧಿ, 8 ಕೋಟಿ ರೂ. ವೆಚ್ಚದಲ್ಲಿ ಬೀಚ್ ಅಭಿವೃದ್ಧಿ, ಬೆಂಗ್ರೆಯಲ್ಲಿ ಕಿರು ಜೆಟ್ಟಿ ನಿರ್ಮಾಣ,ಬೆಂಗ್ರೆ, ತಣ್ಣೀರು ಬಾವಿ ಪರಿಸರದಲ್ಲಿ ಕಿರು ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಸ್ಥಾಪನೆಯಾಗುತ್ತಿದ್ದು, ತೂಗು ಸೇತುವೆ ಬದಲಿಗೆ, ಮಧ್ಯಮ ಗಾತ್ರದ ವಾಹನ ಓಡಾಟಕ್ಕೆ ಅನುಕೂಲವಾಗುವ ಸೇತುವೆ ನಿರ್ಮಾಣ ಅಗತ್ಯವಾಗಿದೆ.
Related Articles
Advertisement
ತಣ್ಣೀರುಬಾವಿ ಬೀಚ್‌ಗೆ ತೆರಳಲು ಫಲ್ಗುಣಿ ನದಿಯನ್ನು ಬೋಳೂರು ಸುಲ್ತಾನ್‌ಬತ್ತೇರಿ ಬಳಿ ದೋಣಿ ಮೂಲಕ ದಾಟುವುದು ಹತ್ತಿರದ ದಾರಿ. ಎರಡು ದೋಣಿ ಮೂಲಕ ಪ್ರಯಾಣಿಕರನ್ನು ದಡದಿಂದ ದಡಕ್ಕೆ ಕೊಂಡೊಯ್ಯುವ ವ್ಯವಸ್ಥೆಯಿದ್ದು, ಒಂದು ದೋಣಿಯಲ್ಲಿ ಗರಿಷ್ಠ 30 ಮಂದಿ ಮಾತ್ರ ಸಾಗಬಹುದಾಗಿದೆ. ರಾತ್ರಿ 7.30ಕ್ಕೆ ದೋಣಿ ಸಂಚಾರದ ಅವಧಿ ಮುಕ್ತಾಯಗೊಳ್ಳುತ್ತದೆ. ಸುಮಾರು 8 ಕಿ.ಮೀ. ಸುತ್ತು ಬಳಸಿ ರಸ್ತೆ ಮೂಲಕವೂ ಸಾಗಬಹುದು. ದೋಣಿ ಸಂಪರ್ಕ ವ್ಯವಸ್ಥೆ ಉತ್ತಮವಾಗಿದ್ದರೂ ಭವಿಷ್ಯದಲ್ಲಿ ಕುದ್ರು ಸೇತುವೆ ಹಾಗೂ ತಣ್ಣೀರುಬಾವಿ ಬೀಚ್ ಬ್ಲೂ ಫ್ಲ್ಯಾಗ್ ಆದಲ್ಲಿ ಪ್ರವಾಸಿಗರ ಸಂಖ್ಯೆ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಸುಲ್ತಾನ್‌ಬತ್ತೇರಿಯಲ್ಲಿ ಸಮರ್ಪಕ ಆಕರ್ಷಕ ಸೇತುವೆಯಾದರೆ ತಣ್ಣೀರುಬಾವಿ ಜನತೆಗೆ ಮಾತ್ರವಲ್ಲದೆ ತಣ್ಣೀರುಬಾವಿ ಸಮುದ್ರ ತೀರಕ್ಕೆ ತೆರಳುವ ಪ್ರವಾಸಿಗರಿಗೂ ಬಹು ಅನುಕೂಲವಾಗಲಿದೆ. ಕಸº ಬೆಂಗ್ರೆ ಮತ್ತು ತೋಟ ಬೆಂಗ್ರೆ ನಿವಾಸಿಗಳು ಈ ಬಗ್ಗೆ ಹತ್ತು ಹಲವು ಬಾರಿ ಸರಕಾರದ ಗಮನ ಸೆಳೆದಿದ್ದರೂ ಕಾರಣಾಂತರಗಳಿಂದ ಸೇತುವೆ ನಿರ್ಮಾಣ ಮಾತ್ರ ಕಡತಗಳಲ್ಲಿಯೇ ಬಾಕಿಯಾಗಿದೆ.
15 ನಿಮಿಷಗಳಲ್ಲಿ ತಲುಪಲು ಸಾಧ್ಯ :
3 ಮೀ. ಅಗಲ ಹಾಗೂ 410 ಮೀ. ಉದ್ದದ ತೂಗುಸೇತುವೆಯ 5 ಕೋಟಿ ರೂ. ವೆಚ್ಚದ ಯೋಜನೆಗೆ 2010ರ ಆ. 23ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿದ್ದರು. ಮಾರುಕಟ್ಟೆ ದರ ಏರುತ್ತಿದ್ದಂತೆ ಯೋಜನಾ ಗಾತ್ರ 12 ಕೋಟಿ ರೂ.ಗೆ ಏರಿತು. 2012ರ ಆಗಸ್ಟ್‌ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಿತು. ಬಳಿಕ ಯೋಜನೆ ದುಬಾರಿ ಎಂದು ಸ್ಥಗಿತವಾಗಿದೆ.
ಈಗ ತಣ್ಣೀರುಬಾವಿ ಬೀಚ್ ಸುತ್ತಮುತ್ತ ಪ್ರವಾಸೋದ್ಯಮ ಗರಿಗೆದರುತ್ತಿದೆ. ಜತೆಗೆ ಈ ಭಾಗದಲ್ಲಿ ಕಿರು ಜೆಟ್ಟಿಯೂ ನಿರ್ಮಾಣವಾಗುತ್ತಿದೆ. ತೂಗು ಸೇತುವೆ ಪರ್ಯಾಯವಾಗಿ ಹೊಸ ಮಧ್ಯಮ ಗಾತ್ರದ ಮಾದರಿಯ ಸೇತುವೆ ನಿರ್ಮಿಸಿದಲ್ಲಿ ಆರ್ಥಿಕ ಚಟುವಟಿಕೆಗೂ ಅನುಕೂಲವಾಗಲಿದೆ ಮಾತ್ರವಲ್ಲ ಮಂಗಳೂರನ್ನು ತಣ್ಣೀರುಬಾವಿಯಿಂದ 15 ನಿಮಿಷದಲ್ಲಿ ತಲುಪಲು ಸಾಧ್ಯವಿದೆ.
ಯೋಜನೆಯ ಮಾಹಿತಿ ಇಲ್ಲ:
ಪ್ರವಾಸಿಗರ ಅನುಕೂಲಕ್ಕಾಗಿ ನಗರದಿಂದ ತಣ್ಣೀರುಬಾವಿ ಟ್ರೀಪಾರ್ಕ್, ಬೀಚ್ ವೀಕ್ಷಣೆಗೆ ಹೋಗಲು ನದಿ ದಾಟಲು ಬೇಕಾದ ತೂಗು ಸೇತುವೆ ನಿರ್ಮಾಣದ ಯೋಜನೆ ಸ್ಮಾರ್ಟ್ ಸಿಟಿಯಿಂದ ಮಾಡಲಾಗಿದೆ. ಭಾರೀ ಗಾತ್ರದ ಯೋಜನೆಗೆ ಸರಕಾರದ ಅನುಮತಿ ಹಾಗೂ ಹೆಚ್ಚಿನ ಆರ್ಥಿಕ ಸಂಪನ್ಮೂಲ ಬೇಕಾಗುತ್ತದೆ. ಸದ್ಯದ ಮಟ್ಟಿಗೆ ಅಂತಹ ಯೋಜನೆಯ ಮಾಹಿತಿ ಇಲ್ಲ.–ಜಯಾನಂದ ಅಂಚನ್, ಮೇಯರ್, ಮನಪಾ