ಕೊರಟಗೆರೆ: ತಣ್ಣೇನಹಳ್ಳಿ ಸಮೀಪ ಬುಧವಾರ ಬೆಳ್ಳಂಬೆಳಗ್ಗೆ ಚಿರತೆ ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿರುವ ಘಟನೆ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದೆ.
ತಾಲೂಕಿನ ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾಪಂ ತಣ್ಣೇನಹಳ್ಳಿ ಗ್ರಾಮದ ಸಮೀಪ ಇರುವ ಕರಡಿ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿ ಸಾರ್ವಜನಿಕರು ಮನೆಯಿಂದ ಹೊರಬರಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಿಗೆ ಇರಕಸಂದ್ರ ಕಾಲೋನಿ ಗ್ರಾಮದಲ್ಲಿ ಇಬ್ಬರು ಬಾಲಕರು ಸೇರಿ ನಾಲ್ಕು ಜನರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಮಾಸುವ ಮುನ್ನ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಕೊರಟಗೆರೆ ಆರಣ್ಯ ಇಲಾಖೆಯ ಸುರೇಶ್ ಭೇಟಿ ನೀಡಿ ಬೋನುಗಳನ್ನ ಇಟ್ಟಿದ್ದಾರೆ. ಇದೆ ಸಂದರ್ಭದಲ್ಲಿ ಸಾರ್ವಜನಿಕರು ಕಳೆದ ಕೆಲವು ದಿನಗಳಿಂದ ನೀಲಗೊಂಡನಹಳ್ಳಿ ಗ್ರಾಪಂ ಸುತ್ತಮುತ್ತ ಚಿರತೆ ಕಾಣಿಸುತ್ತಿದ್ದು, ಆರಣ್ಯ ಇಲಾಖೆಯ ಸಿಬಂದಿಗಳು ತಕ್ಷಣ ಚಿರತೆಯನ್ನ ಸೆರೆ ಹಿಡಿದು ಸಾರ್ವಜನಿಕರು ನೆಮ್ಮದಿಯಿಂದ ಜೀವನ ಸಾಗಿಸಲು ಅನುವು ಮಾಡಿಕೊಡಿ ಎಂದು ಒತ್ತಾಯ ಮಾಡಿದ್ದಾರೆ.