Advertisement
ತೀವ್ರವಾಗಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ, ಬೆಂಕಿ ರಸ್ತೆ ಪಕ್ಕದಲ್ಲಿದ್ದ ನಾಲ್ಕಾರು ಮನೆಗಳಿಗೂ ವ್ಯಾಪಿಸಿದ್ದು, ಅಪಾರ ನಷ್ಟವಾಗಿದೆ. ಹಾಸನದಿಂದ ಹೊಸದುರ್ಗಕ್ಕೆ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಗಿರಿಯಾಪುರದ ಬಸ್ ನಿಲ್ದಾಣದ ಪಕ್ಕದಲ್ಲೇ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಯಲ್ಲಿ ಉರುಳಿ ಬಿತ್ತು. ಪಲ್ಟಿಯಾದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿತು. ಕ್ಷಣಾರ್ಧದಲ್ಲಿ ಟ್ಯಾಂಕರ್ ಒಳಗಿದ್ದ ತೈಲಕ್ಕೆ ಬೆಂಕಿ ಆವರಿಸಿದ್ದು, ಟ್ಯಾಂಕರ್ ಧಗಧಗನೆ ಹೊತ್ತಿ ಉರಿಯಿತು. ಟ್ಯಾಂಕರ್ ಪಲ್ಟಿಯಾಗುತ್ತ ಲೆ ಶಬ್ದ ಕೇಳಿ ಜನ ಮನೆಯಿಂದ ಹೊರ ಬಂದರು. ಬೆಂಕಿ ಆರಿಸಲು ಮುಂದಾದ ಜನರ ಪ್ರಯತ್ನ ಫಲ ಕೊಟ್ಟಿಲ್ಲ.
ನಲ್ಲಿ ಕ್ಲೀನರ್ ಸಹ ಇದ್ದ ಎನ್ನಲಾಗುತ್ತಿದ್ದರೂ ಆತ ಏನಾದ ಎಂಬುದು ತಿಳಿದು ಬಂದಿಲ್ಲ. ಹೀಗಾಗಿ, ಟ್ಯಾಂಕರ್ ರಸ್ತೆಯ ಎಡ ಭಾಗಕ್ಕೆ
ಪಲ್ಟಿಯಾದ ಕಾರಣ ಕ್ಲೀನರ್ ಹೊರಬರ ಲಾರದೆ ಟ್ಯಾಂಕರ್‌ನಲ್ಲೇ ಸಜೀವ ದಹನವಾಗಿರಬಹುದೆಂಬ ಶಂಕೆ ಇದೆ. ಬೆಂಕಿ ಕೆಲವೇ ಕ್ಷಣದಲ್ಲಿ ಅಕ್ಕ-ಪಕ್ಕಕ್ಕೆ ಹರಡಿದ್ದು, ಒಟ್ಟೂ ಆರು ಮನೆಗಳಿಗೆ ಬೆಂಕಿ ತಾಗಿದ್ದು, 2 ಮನೆಗಳು ಸಂಪೂರ್ಣ ಭಸ್ಮ
ಗೊಂಡಿವೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಪ್ರಾಣಹಾನಿಯಾಗಲಿಲ್ಲ. ಇದಲ್ಲದೆ ಗ್ರಾಮ ಪಂಚಾಯತಿಗೆ ಸೇರಿದ ಎರಡು ವಾಣಿಜ್ಯ ಮಳಿಗೆಗಳು, ಪೆಟ್ಟಿಗೆ ಅಂಗಡಿ ಹಾಗೂ ಬಸ್ ಶೆಲ್ಟರ್ ಸಂಪೂರ್ಣ ಹಾಳಾಗಿವೆ. ಅಗ್ನಿ ಶಾಮಕ ದಳದ 150ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.