Advertisement

Tamilnadu; ದಕ್ಷಿಣ ಕನ್ನಡದ ಡಿಸಿ ಆಗಿದ್ದ ಸೆಂಥಿಲ್‌ಗೆ ಅತ್ಯಧಿಕ ಮತ

11:38 PM Jun 06, 2024 | Team Udayavani |

ಚೆನ್ನೈ: ಕರ್ನಾಟಕದ ದಕ್ಷಿಣ ಕನ್ನಡದ ಡಿಸಿ ಆಗಿದ್ದ ಶಶಿಕಾಂತ್‌ ಸೆಂಥಿಲ್‌ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲೇ ಅತ್ಯಧಿಕ ಮತಗಳ ಅಂತರದ ಜಯ ದಾಖಲಿಸಿದ್ದಾರೆ.

Advertisement

ತಿರುವಳ್ಳೂರ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಐಎಎಸ್‌ ಅಧಿಕಾರಿ ಸೆಂಥಿಲ್‌ ಬಿಜೆಪಿಯ ವಿ. ಪೊನ್‌ ಬಾಲಗಣಪತಿ ವಿರುದ್ಧ 5,72,155 ಮತಗಳ ಅಂತರದಿಂದ ಗೆದ್ದಿದ್ದಾರೆ.

ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೋರಾಟದಲ್ಲಿ ವಾರ್ ರೂಮ್ ಮುಖ್ಯಸ್ಥರಾಗಿ ಸೆಂಥಿಲ್ ಅವರು ತನ್ನದೇ ಆದ ದೊಡ್ಡ ಕೊಡುಗೆಯನ್ನು ಕೊಟ್ಟು ಯಶಸ್ಸು ಪಡೆದಿದ್ದರು. ಸೆಂಥಿಲ್ ಮತ್ತು ಅನುಭವಿ ಯುವ ತಂಡ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ಅಧಿಕಾರ ಹಿಡಿಯುವಲ್ಲಿ ಪಾತ್ರ ವಹಿಸಿದ್ದರು. ಸೆಂಥಿಲ್ ಅವರು ನಾಗರಿಕ ಸೇವೆಯನ್ನು ತೊರೆದು 2019 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು.

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಈ ದೊಡ್ಡ ಗೆಲುವಿನ ಮೂಲಕ ಮೀರಿ ನಿಂತಿದ್ದಾರೆ ಎಂದು ಹಲವರು ಅಭಿಪ್ರಾಯ ಹೊರ ಹಾಕಿದ್ದಾರೆ.

ವಿರೂಧುನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಣಿಕಮ್‌ ಟ್ಯಾಗೋರ್‌ ಡಿಎಂಡಿಕೆ ಅಭ್ಯರ್ಥಿ ವಿರುದ್ಧ ಅತ್ಯಂತ ಕಡಿಮೆ(4,379 ಮತ) ಅಂತರದ ಮತದಿಂದ ಜಯ ಗಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next