Advertisement
ಹಾಗಿದ್ದರೆ ಎಪ್ರಿಲ್- ಮೇಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಚಿನ್ನಮ್ಮ ವಹಿಸಲಿರುವ ಪಾತ್ರ ವಾದರೂ ಏನು? ರಾಜಕೀಯ ಮುಖ್ಯವಾಹಿನಿಗೆ ಧುಮುಕುತ್ತಾರೋ ತೆರೆಯಮರೆಯ ಹಿಂದಿನ ಚಟುವಟಿಕೆಗಳ ಮೂಲಕ ತನಗೆ ಬೇಕಾದವರನ್ನು ಆಯ್ಕೆ ಮಾಡಿ ರಾಜ್ಯಭಾರ ನಡೆಸಲಿದ್ದಾರೋ ಎಂಬ ವಿಚಾರ ಸದ್ಯಕ್ಕೆ ನಿಗೂಢವಾಗಿದೆ. ಕರ್ನಾಟಕದಿಂದ ಹೊಸೂರು ಮೂಲಕ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಪ್ರವೇಶದ ಸಂದರ್ಭದಲ್ಲಿ ಶಶಿಕಲಾ ನಟರಾಜನ್ ಅವರು ಮಾತನಾಡಿದ ಅಂಶದಲ್ಲಿ ಒಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ನಾನು ತಮಿಳು ಭಾಷೆ, ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ತಮಿಳು ಭಾಷಿಕರನ್ನು ಪ್ರೀತಿಸುತ್ತೇನೆ. ಆದರೆ ನಾನು ಮೌನವಾಗಿರಬೇಕು ಎಂಬ ಹೇರು ವಿಕೆಯ ಒತ್ತಡ ಸಹಿಸಲಾರೆ. ನಾನು ಸಕ್ರೀಯ ರಾಜಕೀಯಕ್ಕೆ ಬರುವೆ- ಹೀಗೆಂದು ಅವರು ಪ್ರಕಟಿಸಿದ್ದಾರೆ.
Related Articles
Advertisement
ಕಾರ್‌ಗೆ ಪಕ್ಷದ ಧ್ವಜವನ್ನು ಹಾಕಿದ್ದರು. ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಕೈ ಕೈ ಹಿಸುಕಿಕೊಂಡರಷ್ಟೇ ಅಲ್ಲದೆ ಇನ್ನೇನೂ ಮಾಡಲು ಸಾಧ್ಯವಾಗದೆ ಇದ್ದುಬಿಟ್ಟರು.
2021ರ ಚುನಾವಣೆಯಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಇಲ್ಲ. ಹೀಗಾಗಿ ಎಐಎಡಿಎಂಕೆ, ಡಿಎಂಕೆ – ಎರಡೂ ಪಕ್ಷಗಳಿಗೆ ಹೊಸ ನಾಯಕತ್ವ. ಡಿಎಂಕೆಗಾದರೆ ಎಂ.ಕೆ. ಸ್ಟಾಲಿನ್ ನಾಯಕತ್ವ ಇದೆ. ಅಪ್ಪನ ಗರಡಿಯಲ್ಲಿ ರಾಜಕೀಯದ ಒಳಸುಳಿಗಳನ್ನು ಅರಿತವರು ಸ್ಟಾಲಿನ್. ಜತೆಗೆ ಕೇಂದ್ರ ನಾಯಕತ್ವದ ಜತೆಗೆ ಸೌಹಾರ್ದ ಸಂಬಂಧ ಹೊಂದಿರುವವರೂ ಹೌದು. ಇನ್ನು ಆಡಳಿತಾರೂಡ ಎಐಎಡಿಎಂಕೆಯಲ್ಲಿ ಛಾಪು ಮೂಡಿಸುವ ನಾಯಕರೇ ಇಲ್ಲ. ಹಾಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪಕ್ಷ ನಿಷ್ಠರು ಹೌದಾದರೂ, ಜಯಲಲಿತಾ ಅಥವಾ ಎಂ.ಕೆ.ಸ್ಟಾಲಿನ್ ಬಿರುಸು ಇದೆ ಎನ್ನಲು ಸ್ವಲ್ಪ ಕಷ್ಟವೇ ಆದೀತು.
ಶಶಿಕಲಾ ನಟರಾಜನ್ ನಡೆಸಿದ್ದ ರೋಡ್ ಶೋಗೆ ಸಿಕ್ಕಿದ ಜನಬೆಂಬಲ ನೋಡಿ, ಓದಿ ತಿಳಿದ ಪಳನಿಸ್ವಾಮಿ, ಪನ್ನೀರ್ ಸೆಲ್ವಂ ನಾಯಕತ್ವ ನಡುಗಿ ಹೋಗಿದ್ದಂತೂ ಹೌದು. ಅದಕ್ಕಾಗಿಯೇ ಶಶಿಕಲಾ ವಿರುದ್ಧ ಕಟುವಾಗಿ ಮಾತನಾಡುತ್ತಿದ್ದ ಮುಖಂಡರೆಲ್ಲ ದನಿ ತಗ್ಗಿಸಿದ್ದಾರೆ. ಆದರೆ ಶಶಿಕಲಾರ ಸೋದರ ಸಂಬಂಧಿ, ಶಾಸಕ ಟಿ.ಟಿ.ವಿ. ದಿನಕರನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಿನಕರನ್ ಇಲ್ಲದೆ, ಚಿನ್ನಮ್ಮ ಎಐಎಡಿಎಂಕೆ ಬರುವ ಸಾಧ್ಯತೆ ಖಂಡಿತವಾಗಿಯೂ ಇಲ್ಲ. ಮುಖ್ಯಮಂತ್ರಿ ಪಳನಿಸ್ವಾಮಿ ಜಯಲಲಿತಾ ಇರುವಾಗಲೇ ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಅವರು ಮತ್ತೆ ಪಕ್ಷಕ್ಕೆ ಬಂದರೂ ಸ್ವೀಕರಿಸಲಾರೆವು ಎಂದಿದ್ದಾರೆ. ಕಾನೂನು ಸಚಿವ ವಿ. ಷಣ್ಮುಗಂ ಚಿನ್ನಮ್ಮ ದಿನಕರನ್ ಅವರಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ.
ಅಂದ ಹಾಗೆ ಶಶಿಕಲಾ ನಟರಾಜನ್ ದಕ್ಷಿಣ ತಮಿಳುನಾಡಿನಲ್ಲಿ ಪ್ರಭಾವಶಾಲಿ ಯಾಗಿರುವ ತೇವರ್ ಸಮುದಾಯಕ್ಕೆ ಸೇರಿದವರು. ಹೀಗಾಗಿ ಅವರ ವಿರುದ್ಧ ಏನು ಪ್ರಕರಣಗಳು ಇದ್ದರೂ ಅದು ಪರಿಣಾಮ ಕಾರಿಯಾಗದು. ಸದ್ಯ ಕೋರ್ಟ್ ತೀರ್ಪಿನ ಅನ್ವಯ ಅವರು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಹೀಗಾಗಿ ಅವರು 2026ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ದೃಷ್ಟಿಯನ್ನಿರಿಸಿಕೊಂಡು ದೃಢ, ಆದರೆ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೇ ಸ್ಪಷ್ಟ. ಹೀಗಾಗಿ ಅವರು ತಾತ್ಕಾಲಿಕ ಲಾಭ ತಂದುಕೊಡುವ ಮಾರ್ಗ ಗಳಿಗೆ ಸದ್ಯಕ್ಕೆ ಮೊರೆ ಹೋಗಲಾರರು.
ಎಪ್ರಿಲ್-ಮೇ ಚುನಾವಣೆಯಲ್ಲಿ ಶಶಿಕಲಾ ನಟರಾಜನ್ ಅವರಿಗೆ ನಿರೀಕ್ಷಿತ ಗೆಲುವು, ಅನುಕೂಲ ಆಗಬಹುದು ಅಥವಾ ಆಗದೆಯೂ ಇರಬಹುದು. ಆದರೆ ಅವರು ಮತ ವಿಭಜನೆ ಯಲ್ಲಿ ಪ್ರಭಾವ ಬೀರುವುದು ಖಚಿತ. ತಮಿಳುನಾಡಿನಲ್ಲಿ ಪುರಚ್ಚಿ ತಲೈವಿ ನಾಯಕಿ ಎಂದರೆ ದಿ| ಜಯಲಲಿತಾ ಅವರೇ. ಹೀಗಾಗಿ ಚಿನ್ನಮ್ಮ ಬೆಂಗಳೂರಿನಿಂದ ಚೆನ್ನೈಗೆ ಆಗಮಿಸಿದ್ದು ಆಪ್ತ ಸ್ನೇಹಿ ತೆಯ ಕಾರ್‌ನಲ್ಲಿ. ಅವರು ಮತ್ತೂಮ್ಮೆ ಎಐಎಡಿಎಂಕೆಯನ್ನು ಕೈವಶ ಮಾಡುವುದು ಖಚಿತವೇ. ಅನಂತರ ಏನಾಗಲಿದೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ ತಾನೆ?
ಬಿಜೆಪಿ ಮತ್ತು ಸದ್ಯ ಅಧಿಕಾರದಲ್ಲಿರುವ ಎಐಎಡಿಎಂಕೆ ನಡುವಿನ ಮೈತ್ರಿಕೂಟದ ಬಗ್ಗೆ ಹೊಂಚ ದೃಷ್ಟಿ ಹಾಯಿಸೋಣ. 234 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಹೊಂದಿಲ್ಲ. ಎಐಎಡಿಎಂಕೆ 123, ಡಿಎಂಕೆ 97, ಕಾಂಗ್ರೆಸ್ 7, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 1, ಸ್ವತಂತ್ರ 1, ನಾಮನಿರ್ದೇಶಿತ ಸದಸ್ಯ 1, ಸ್ಪೀಕರ್ 1, ತೆರವಾಗಿರುವ ಸ್ಥಾನಗಳು 4. ಎಪ್ರಿಲ್- ಮೇ ವಿಧಾನಸಭೆ ಚುನಾವಣೆಯಲ್ಲಿ ಒಂದಷ್ಟು ಸ್ಥಾನಗಳನ್ನು ಗೆಲ್ಲಬೇಕು ಎಂದು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕರ್ನಾಟಕದ ಮಾಜಿ ಸಚಿವ ಸಿ.ಟಿ. ರವಿ ಆ ರಾಜ್ಯದಲ್ಲಿ ಚುನಾವಣ ಉಸ್ತುವಾರಿ ಹೊತ್ತಿದ್ದಾರೆ ಮತ್ತು ಹಲವಾರು ಕಾರ್ಯಕ್ರಮ ಗಳನ್ನು, ರ್ಯಾಲಿಗಳನ್ನು ಆಯೋಜಿಸಿದ್ದಾರೆ. ಅದು ಮತಗಳಾಗಿ ಪ್ರಾಪ್ತವಾದೀತೋ ಎಂದು ಈಗ ಹೇಳಲು ಕಷ್ಟ.
ಕೆಲವೊಂದು ವರದಿಗಳ ಪ್ರಕಾರ ಬಿಜೆಪಿಯ ವರಿಷ್ಠರು ಶಶಿಕಲಾ ಮತ್ತು ಟಿ.ಟಿ.ವಿ. ದಿನಕರನ್ ಮತ್ತೆ ಎಐಎಡಿಎಂಕೆಗೆ ಸೇರಬೇಕು. ಈ ಮೂಲಕ, ಕಾಂಗ್ರೆಸ್- ಡಿಎಂಕೆ ಮೈತ್ರಿಕೂಟಕ್ಕೆ ಪ್ರಬಲ ಪ್ರತಿಸ್ಪರ್ಧಿ ರಾಜಕೀಯ ಒಕ್ಕೂಟ ರಚಿಸಲು ಅವರನ್ನು ಮತ್ತೆ ಪಕ್ಷ ಸೇರ್ಪಡೆ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದ್ದಾರೆ. ಇದೇ ವಿಚಾರಕ್ಕೆ ದಿನಕರನ್ ಒಂದೆರಡು ಬಾರಿ ಹೊಸದಿಲ್ಲಿಗೆ ಹೋಗಿದ್ದರಂತೆ. ಈಗಾಗಲೇ ಉಲ್ಲೇಖೀಸಿರುವಂತೆ ಶಶಿಕಲಾ ದೃಢವಾದ, ಆದರೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಕೆಲವೊಂದು ಪ್ರಕರಣಗಳು ಇನ್ನೂ ತನಿಖೆ, ವಿಚಾರಣೆ ಹಂತದಲ್ಲಿ ಇರುವಾಗ ಬಿಜೆಪಿ ಜತೆಗೆ ಮೈತ್ರಿಯೋ, ವಿರೋಧವನ್ನೋ ಚಿನ್ನಮ್ಮ ಮಾಡಲು ತಯಾರಿಲ್ಲ. ಮೈತ್ರಿ ಮಾಡಿಕೊಂಡರೆ, ಮುಂದಿನ ದಿನಗಳಲ್ಲಿ ಮುರಿಯಲು ಕಷ್ಟವಾಗಬಹುದು ಮತ್ತು ಸದ್ಯ ಬಿಜೆಪಿ ಎಐಎಡಿಎಂಕೆ ಜತೆಗೆ ಇದೆ. ಹೀಗಾಗಿ ಎಚ್ಚರಿಕೆಯ ಸಮಾನ ಅಂತರ ಇರಿಸಲು ಮುಂದಾಗಿದ್ದಾರೆ ಎನ್ನುವುದು ಚಿನ್ನಮ್ಮ ಆಪ್ತರ ಪ್ರತಿಪಾದನೆ. ಎಐಎಡಿಎಂಕೆಯಲ್ಲಿ ಈಗಲೂ ಶಶಿಕಲಾ ಬೆಂಬಲಿಗರು ಇದ್ದಾರೆ. ಅವರು ಪಳನಿಸ್ವಾಮಿ, ಪನ್ನೀರ್ ಸೆಲ್ವಂ ನಾಯಕತ್ವ ತೊರೆದು ಬರಲು ಚಿನ್ನಮ್ಮ ಕಾಯುತ್ತಿದ್ದಾರೆ. ಚುನಾವಣ ಆಯೋಗ ಫೆ.15ರ ಬಳಿಕ ದಿನಾಂಕ ಪ್ರಕಟ ಮಾಡುವ ಸಾಧ್ಯತೆಗಳು ಇವೆ.
ಹೀಗಾಗಿ ಸರ್ಕಸ್‌ಗೆ ವೇದಿಕೆ ಸಿದ್ಧವಾಗಿದೆ. ಆದರೆ ರಿಂಗ್ ಮಾಸ್ಟರ್ ವೇದಿಕೆಗೆ ಬಾರದೆ, ಕೌಶಲ ಪ್ರದರ್ಶಿಸುತ್ತಾರೆಯೋ, ನೋಡಬೇಕಾಗಿದೆ.
ಸದಾಶಿವ ಕೆ.