Advertisement

ಪ್ರೊ ಕಬಡ್ಡಿ ಲೀಗ್‌: ಖಾತೆ ತೆರೆದ ತಮಿಳ್‌ ತಲೈವಾಸ್‌, ಪಾಟ್ನಾ ಪೈರೇಟ್ಸ್‌ಗೆ ಸೋಲು

10:49 PM Oct 17, 2022 | Team Udayavani |

ಬೆಂಗಳೂರು: ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿದ್ದ ತಂಡಗಳ ಜಿದ್ದಾಜಿದ್ದಿ ಹೋರಾಟವೊಂದರಲ್ಲಿ ತಮಿಳ್‌ ತಲೈವಾಸ್‌ 33-32 ಅಂತರದಿಂದ ಪಾಟ್ನಾ ಪೈರೇಟ್ಸ್‌ಗೆ ಸೋಲುಣಿಸಿತು. ಇದರೊಂದಿಗೆ ಪ್ರೊ ಕಬಡ್ಡಿ ಸೀಸನ್‌-9ರಲ್ಲಿ ಗೆಲುವಿನ ಖಾತೆ ತೆರೆಯಿತು.

Advertisement

ಇನ್ನೊಂದೆಡೆ ಪಾಟ್ನಾ ಗೆಲುವಿನ ಸಂಭ್ರಮ ವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತು. ಇದು 5 ಪಂದ್ಯಗಳಲ್ಲಿ ಪಾಟ್ನಾಗೆ ಎದುರಾದ 4ನೇ ಸೋಲು. ಒಂದು ಪಂದ್ಯ ಟೈ ಆಗಿದೆ.

ತಲೈವಾಸ್‌ ಪರ ರೈಡರ್‌ ನರೇಂದರ್‌ 9 ಅಂಕ ತಂದಿತ್ತರು. 7 ಟಚ್‌ ಪಾಯಿಂಟ್‌ ಜತೆಗೆ 2 ಬೋನಸ್‌ ಅಂಕ ಇದರಲ್ಲಿ ಸೇರಿತ್ತು. ಪಾಟ್ನಾ ಪರ ಆಲ್‌ರೌಂಡರ್‌ ರೋಹಿತ್‌ ಗುಲಿಯ ಅಮೋಘ ಪ್ರದರ್ಶನ ನೀಡಿದರು (11 ಅಂಕ). ರೈಡರ್‌ ಸಚಿನ್‌ 6 ಅಂಕ ಗಳಿಸಿ ಕೊಟ್ಟರು. ವಿರಾಮದ ವೇಳೆ ಪಾಟ್ನಾ 17-15 ಅಂಕಗಳ ಮುನ್ನಡೆಯಲ್ಲಿತ್ತು.

ಡೆಲ್ಲಿ ಅಜೇಯ
ದ್ವಿತೀಯ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ 38-36 ಅಂತರದಿಂದ ಹರ್ಯಾಣ ಸ್ಟೀಲರ್ಸ್‌ ತಂಡವನ್ನು ಸೋಲಿಸಿತು. ಇದರೊಂದಿಗೆ ಅದು ಐದೂ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನವನ್ನು ಗಟ್ಟಿ ಮಾಡಿಕೊಂಡಿತು. ರೈಡರ್‌ ನವೀನ್‌ ಕುಮಾರ್‌ 15 ಅಂಕಗಳೊಂದಿಗೆ ಡೆಲ್ಲಿ ಹೀರೋ ಆಗಿ ಮೆರೆದರು. ಹರ್ಯಾಣದ ರೈಡರ್‌ ಮನ್‌ಜಿತ್‌ 12, ಮೀತು 6 ಅಂಕ ತಂದುಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next