Advertisement

ತಮಿಳುನಾಡಿನ ಎಲ್ಲ ಜಿಲ್ಲೆಗಳಲ್ಲಿ ಕೇಂದ್ರ ತಿರಸ್ಕೃತ ಟ್ಯಾಬ್ಲೋ ಪ್ರದರ್ಶನ

12:36 PM Jan 19, 2022 | Team Udayavani |

ಚೆನ್ನೈ : ಗಣರಾಜ್ಯೋತ್ಸವದ ಪರೇಡ್‌ನಲ್ಲಿ ತಮ್ಮ ರಾಜ್ಯದ ಸ್ತಬ್ದಚಿತ್ರಕ್ಕೆ ಅವಕಾಶ ನೀಡದೇ ಇರುವ ವಿವಾದವನ್ನು ಸದ್ಯಕ್ಕೆ ಇತ್ಯರ್ಥಪಡಿಸಿಕೊಳ್ಳುವುದಕ್ಕೆ ತಮಿಳುನಾಡು ಸಿಎಂ ಸಿದ್ದರಿಲ್ಲ. ಈ ವಿಚಾರದಲ್ಲಿ ಕೇಂದ್ರಕ್ಕೆ ಸೆಡ್ಡು ಹೊಡೆಯಲು ನಿರ್ಧರಿಸಿರುವ ಅವರು ಕೇಂದ್ರದಿಂದ ತಿರಸ್ಕೃತಗೊಂಡ ಸ್ತಬ್ದಚಿತ್ರವನ್ನು ತಮಿಳುನಾಡಿನ ಎಲ್ಲ ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಲು ತೀರ್ಮಾನಿಸಿದ್ದಾರೆ.

Advertisement

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೆ.ಸ್ಟ್ಯಾಲಿನ್, ಕೇಂದ್ರದ ನಡೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಧ್ಯೋತಕವಾಗಿ ಗಣರಾಜ್ಯೋತ್ಸವದ ದಿನದಂದು ಚೆನ್ನೈನಲ್ಲಿ ಈ ಸ್ತಬ್ದಚಿತ್ರದ ಮೆರವಣಿಗೆ ನಡೆಸಲಾಗುತ್ತದೆ. ಜತೆಗೆ ಪ್ರಮುಖ ಜಿಲ್ಲೆಗಳಲ್ಲಿ ಮಾದರಿ ಸ್ತಬ್ದಚಿತ್ರವನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ.

ಸ್ವಾತಂತ್ಯ ಹೋರಾಟಕ್ಕೆ ತಮಿಳುನಾಡಿನ ಕೊಡುಗೆಯನ್ನು ಈ ಬಾರಿಯ ಸ್ತಬ್ದಚಿತ್ರಕ್ಕೆ ಥೀಮ್ ನೀಡಲಾಗಿತ್ತು. ಕೇಂದ್ರ ರಕ್ಷಣಾ ಇಲಾಖೆ ಸೂಚಿಸಿದ್ದ ಬದಲಾವಣೆಗಳಿಗೆ ಮೂರು ಬಾರಿ ನಾವು ಸ್ಪಂದಿಸಿದ್ದೆವು. ಆದರೆ ನಾಲ್ಕನೆ ಬಾರಿಗೆ ಯಾವುದೇ ಕಾರಣ ನೀಡದೇ ತಿರಸ್ಕರಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಬೇಸರ ತೋರ್ಪಡಿಸಿದ್ದೇವೆ. ಇದಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಗೃಹ ಸಚಿವಾಲಯದಿಂದ ಪ್ರತಿಕ್ರಿಯೆ ಬಂದಿದೆ. ಒಟ್ಟಾರೆಯಾಗಿ ತಮಿಳುನಾಡಿನ ಭಾವನೆಗೆ ಇದರಿಂದ ಧಕ್ಕೆಯಾಗಿದೆ ಎಂದು ಸ್ಟ್ಯಾಲಿನ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next