ಚೆನ್ನೈ : ತಮಿಳುನಾಡಿನ ತಿರುಪ್ಪತ್ತೂರಿನ ವಾಣಿಯಂಬಾಡಿಯಲ್ಲಿ ಶನಿವಾರ ತೈಪೂಸಂ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.
Advertisement
ವ್ಯಕ್ತಿಯೊಬ್ಬರು ವಿತರಿಸುತ್ತಿದ್ದ ಉಚಿತ ವೇಷ್ಟಿಗಳು ಮತ್ತು ಸೀರೆಗಳ ಸಂಗ್ರಹಕ್ಕಾಗಿ ಟೋಕನ್‌ಗಳನ್ನು ಸ್ವೀಕರಿಸಲು ಏಕಕಾಲದಲ್ಲಿ ಸಾವಿರಾರು ಜನರು ಜಮಾಯಿಸಿದಾಗ ಅವಘಡ ನಡೆದಿದೆ.
ವ್ಯಕ್ತಿಯೊಬ್ಬರು ವಸ್ತ್ರಗಳನ್ನು ವಿತರಿಸುತ್ತಿದ್ದರು ಈ ವೇಳೆ ಏಕಕಾಲದಲ್ಲಿ ಜನರು ಮುಗಿಬಿದ್ದ ಕಾರಣ ಅವಘಡ ಸಂಭವಿಸಿದೆ ಎಂದು ತಿರುಪತ್ತೂರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.