Advertisement

Tirupattur ಧರ್ಮಸ್ಥಳ ಪ್ರವಾಸ ಮುಗಿಸಿ ತೆರಳುತ್ತಿದ್ದ 7 ಮಹಿಳೆಯರ ದುರ್ಮರಣ

10:05 PM Sep 11, 2023 | Team Udayavani |

ತಿರುಪತ್ತೂರು: ಧರ್ಮಸ್ಥಳ ಪ್ರವಾಸಕ್ಕೆ ಬಂದು ತಮಿಳುನಾಡಿನ ತಿರುಪತ್ತೂರಿನ ಒನಂಗುಟ್ಟೈ ಗ್ರಾಮಕ್ಕೆ ತೆರಳುತ್ತಿದ್ದವರ ಮೇಲೆ ವಾಹನ ಬಿದ್ದು ಏಳು ಮಹಿಳೆಯರು ಅಸುನೀಗಿದ್ದಾರೆ. ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ.

Advertisement

ಧರ್ಮಸ್ಥಳ ಪ್ರವಾಸ ಮುಗಿಸಿ 2 ವಾಹನಗಳಲ್ಲಿ ಇವರೆಲ್ಲರೂ ಊರಿಗೆ ವಾಪಸಾಗುತ್ತಿದ್ದರು. ಈ ಹಂತದಲ್ಲಿ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಟ್ರಾಂಪಳ್ಳಿ ಎಂಬಲ್ಲಿ ಅವರು ಪ್ರಯಾಣಿಸುತ್ತಿದ್ದ 2 ವಾಹನಗಳ ಪೈಕಿ ಒಂದರ ಟೈರ್‌ ಸ್ಫೋಟಗೊಂಡು ಕೆಟ್ಟು ಹೋಯಿತು. ಅದರ ಚಾಲಕ ಪ್ರಯಾಣಿಕರನ್ನು ವಾಹನದಿಂದ ಇಳಿಸಿ, ದುರಸ್ತಿ ಮಾಡುತ್ತಿದ್ದ. ವಾಹನದಲ್ಲಿ ಇದ್ದವರು ರಸ್ತೆ ಬದಿಯಲ್ಲಿ ಕುಳಿತಿದ್ದರು. ಆಗ ಬೆಂಗಳೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಲಾರಿ, ಈ ವ್ಯಾನ್‌ಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ವ್ಯಾನ್‌ ಮಗುಚಿ, ರಸ್ತೆಯಲ್ಲಿ ಕುಳಿತಿದ್ದವರ ಮೇಲೆ ಬಿದ್ದಿದ್ದು, ಏಳು ಮಹಿಳೆಯರು ಅಸುನೀಗಿದ್ದಾರೆ.

ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರು, ವ್ಯಾನ್‌ನಲ್ಲಿದ್ದ ಏಳು ಮಂದಿ ಗಾಯಗೊಂಡಿದ್ದಾರೆ.

ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ., ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next