ಚೆನ್ನೈ/ಭುವನೇಶ್ವರ: ತಮಿಳುನಾಡು ರಾಜ ಧಾನಿ ಚೆನ್ನೈಯಲ್ಲಿ ಶುಕ್ರವಾರ ಮಳೆಗೆ ಕೊಂಚ ಬಿಡುವು ಇತ್ತು. ಇದರ ಹೊರತಾ ಗಿಯೂ ನೀಲಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ನ.12ರಿಂದ 5 ದಿನಗಳ ಕಾಲ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಲಿದೆ ಎಂದು ಹವಾ ಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕಾರೈಕಲ್, ಪುದುಚೇರಿಗಳಲ್ಲಿಯೂ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡ ಲಾಗಿದೆ. ಚೆನ್ನೈಯಲ್ಲಿ ಬಿದ್ದ ಮರ ಗಳ ತೆರವು, ನಿಂತಿರುವ ನೀರು ಹರಿದು ಹೋಗಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಮುಂದುವರಿದ ಸಮೀಕ್ಷೆ: ಚೆನ್ನೈಯಲ್ಲಿ ಶುಕ್ರವಾರವೂ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಪ್ರದೇಶಗಳಲ್ಲಿ ಖುದ್ದು ಪರಿಶೀ ಲನೆ ನಡೆಸಿದ್ದಾರೆ. ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿ ಆಶ್ರಯ ಪಡೆದವರ ಜತೆಗೆ ಭೇಟಿಯಾಗಿದ್ದಾರೆ ಮತ್ತು ಅವರಿಗೆ ಖುದ್ದು ಆಹಾರ ವಿತರಿಸಿದ್ದಾರೆ. ಚೆಂಗಲ್ಪಟ್ಟು ಜಿಲ್ಲೆ ಯಲ್ಲಿ ಪುಟ್ಟ ಅಂಗಡಿಯಲ್ಲಿ ಚಹಾ ಕುಡಿದು, ಸ್ಥಳೀಯರ ಜತೆಗೆ ಮಳೆ ಪರಿ ಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ.
ರಕ್ಷಿಸಿದ್ದ ವ್ಯಕ್ತಿ ಸಾವು: ಚೆನ್ನೈಯ ಕಿಲುಪ್ಪಾಕು ಶ್ಮಶಾನದಿಂದ ಮಹಿಳಾ ಪೊಲೀಸ್ ಅಧಿ ಕಾರಿ ರಾಜೇಶ್ವರಿ ಅವರು ರಕ್ಷಿಸಿದ್ದ ಉದಯ ಕುಮಾರ್ ಎಂಬ ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ನೀರಿನಲ್ಲಿ ಪ್ರಜ್ಞಾ ಶೂನ್ಯ ರಾಗಿ ಬಿದ್ದಿದ್ದ ಅವರನ್ನು ರಾಜೇಶ್ವರಿ ಅವರು ಹೆಗಲ ಮೇಲೆ ಹೊತ್ತುಕೊಂಡು ಆಟೋ ರಿಕ್ಷಾ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು ಮತ್ತು ಖುದ್ದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪ್ರಶಂಸಾಪತ್ರ ನೀಡಿ ಗೌರವಿಸಿದ್ದಾರೆ. ಇದೇ ವೇಳೆ, ಪುದುಚೇರಿ ಯಲ್ಲಿ ಮಳೆಯಿಂದ ನೊಂದಿರುವ ರೈತರು, ಕಾರ್ಮಿಕರಿಗೆ ಮುಖ್ಯಮಂತ್ರಿ ಎನ್.ರಂಗಸಾಮಿ ಪರಿಹಾರ ನೀಡಿದ್ದಾರೆ.
ಒಡಿಶಾದಲ್ಲಿಯೂ ಮಳೆ: ಬಂಗಾಲಕೊಲ್ಲಿ ಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದಾಗಿ ಒಡಿಶಾದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾ ಗಿದೆ. ಗಂಜಾಂ ಜಿಲ್ಲೆಯ ಹಲವು ಭಾಗ ಗಳಲ್ಲಿ ಧಾರಾಕಾರವಾಗಿ ಮಳೆಯಾಗಿದೆ. ಗಜಪತಿ, ರಾಯಗಢ, ಕಂಧಮಾಲ್ ದಿಲ್ಲೆಗಳಲ್ಲಿ ರವಿವಾರ ಬೆಳಗ್ಗಿನ ವರೆಗಿನ ಮುನ್ನೆಚ್ಚರಿಕೆ ಪ್ರಕಾರ ಭಾರೀ ಮಳೆ ಸಾಧ್ಯತೆ ಇದೆ. ಪುರಿಯಲ್ಲೂ ಮಳೆ ಸಾಧ್ಯತೆ ಇದೆ.