ಚೆನ್ನೈ: ಭಾರತೀಯ ಜನತಾ ಪಕ್ಷ, ಆರ್ ಎಸ್ ಎಸ್ ಕಚೇರಿ, ಮುಖಂಡರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಸೋಮವಾರ (ಸೆಪ್ಟೆಂಬರ್ 26) ತಮಿಳುನಾಡು ಪೊಲೀಸರು ಪಾಪ್ಯುಲರ್ ಫ್ಟಂಟ್ ಆಫ್ ಇಂಡಿಯಾ ಮತ್ತು ಎಸ್ ಡಿಪಿಐ ಕಾರ್ಯಕರ್ತರನ್ನು ಬಂಧಿಸುತ್ತಿರುವ ಘಟನೆ ಮುಂದುವರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಭಯದಾತೆ…. ಸರ್ವಾಲಂಕಾರ ಭೂಷಿತೆ ನವದುರ್ಗೆಗೆ….. ನವರಾತ್ರಿಯ ವೈಭವೋತ್ಸವ
ಸೆಪ್ಟೆಂಬರ್ 22ರಂದು ಎನ್ ಐಎ ಸ್ಥಳೀಯ ಪಿಎಫ್ ಐ ಮತ್ತು ಎಸ್ ಡಿಪಿಐ ಮುಖಂಡರನ್ನು ಬಂಧಿಸಿದ ನಂತರ ಪಿಎಫ್ ಐ, ಎಸ್ ಡಿಪಿಐ ಕಾರ್ಯಕರ್ತರು ಆರ್ ಎಸ್ ಎಸ್, ಬಿಜೆಪಿ ಕಚೇರಿ, ಕಾರ್ಯಕರ್ತರು ಮತ್ತು ಮನೆಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ.
ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಡಿಜಿಪಿ ಸಿ.ಶೈಲೇಂದ್ರ ಕುಮಾರ್ ಅವರು, ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಕಮಿಷನರ್ ಗಳಿಗೆ ನಿರ್ದೇಶನ ನೀಡಿದ್ದಾರೆ.
ಭಾನುವಾರ ಕೂಡಾ ಪೊಲೀಸರು ಎಸ್ ಡಿಪಿಐನ ಸೈಯದ್ ಅಲಿ (42ವರ್ಷ) ಸೇರಿದಂತೆ ಹಲವು ಜನರನ್ನು ಬಂಧಿಸಿದ್ದರು. ಸೇಲಂನ ಆರ್ ಎಸ್ ಎಸ್ ಮುಖಂಡ ವಿ.ಕೆ.ರಾಜನ್ ಅವರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ಪ್ರಕರಣದಲ್ಲಿ ಎಸ್ ಡಿಪಿಐ ಅಧ್ಯಕ್ಷ ಕೆ.ಖಾದೀರ್ ಹುಸೈನ್ ಎಂಬಾತನನ್ನು ಬಂಧಿಸಲಾಗಿತ್ತು. ಇಬ್ಬರನ್ನೂ ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಈರೋಡ್ ನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ವಿ.ದಕ್ಷಿಣಮೂರ್ತಿ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಎಸ್ ಡಿಪಿಐನ ಸದ್ದಾಂ ಹುಸೈನ್, ಖಲೀಲ್ ರಹಮಾನ್, ಎ.ಜಾಫರ್ ಮತ್ತು ಎ.ಅಶೀಕ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.