ಚೆನ್ನೈ: ಹಿಂದೂ ಮಕ್ಕಳ್ ಕಚ್ಚಿ ಪಕ್ಷದ ಹಿರಿಯ ಮುಖಂಡನನ್ನು ಥಳಿಸಿ ಹತ್ಯೆಗೈದಿರುವ ಘಟನೆ ಮಧುರೈನಲ್ಲಿ ಮಂಗಳವಾರ ರಾತ್ರಿ (ಜ.31 ರಂದು) ನಡೆದಿದೆ.
ಆಭರಣ ಅಂಗಡಿಯ ಮಾಲೀಕ ಮತ್ತು ಹಿಂದೂ ಮಕ್ಕಳ್ ಕಚ್ಚಿ ಪಕ್ಷದ ದಕ್ಷಿಣ ಮಧುರೈನ ಉಪ ಕಾರ್ಯದರ್ಶಿಯಾಗಿದ್ದ ಮಣಿಕಂಠನ್ (40) ಕೊಲೆಯಾದ ವ್ಯಕ್ತಿ.
ಮಣಿಕಂಠನ್ ತನ್ನ ಅಂಗಡಿಯ ಬಳಿ ನಡೆದುಕೊಂಡು ಹೋಗುತ್ತಿರುವ ವೇಳೆ ಇಬ್ಬರು ಅಪರಿಚಿತರು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ವೇಳೆ ಕಲ್ಲುಗಳು ಮತ್ತು ಕುಡುಗೋಲಿನಿಂದ ಮಣಿಕಂಠನ್ ಅವರ ಮೇಲೆ ತೀವ್ರವಾದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತೀವ್ರ ಗಾಯಗೊಂಡ ಮಣಿಕಂಠನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
Related Articles
ಜೈಹಿಂದಪುರಂ ಪೊಲೀಸ್ ಠಾಣಾ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.